webnews kannada

ಕೋಟದ ಪಂಚವರ್ಣ ಸಂಘಟನೆಗೆ ಜೈ ಕುಂದಾಪುರ ಸೇವಾ ಪುರಸ್ಕಾರ

ಕೋಟದ ಪಂಚವರ್ಣ ಸಂಘಟನೆಗೆ ಜೈ ಕುಂದಾಪುರ ಸೇವಾ ಪುರಸ್ಕಾರ
ಕೋಟ: ಇಲ್ಲಿನ ಉಡುಪಿ ಜಿಲ್ಲೆಯ ಸಾಮಾಜಿಕ ಕಳಕಳಿ ಹಾಗೂ ರಕ್ತದಾನದಂತಹ ಕಾರ್ಯಕ್ರಮಗಳಿಂದ ಮನೆಮಾತಾದ ಸಂಸ್ಥೆ ಕುಂದಾಪುರದ ಜೈ ಕುಂದಾಪುರ ಸೇವಾ ಟ್ರಸ್ಟ್ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದು ಇದೇ ಬರುವ ಎಪ್ರಿಲ್ ೧೨ರಂದು ಕೋಟ ಆರಕ್ಷಕ ಠಾಣೆಯ ಮುಂಭಾಗ ಜೈ ಕುಂದಾಪುರ ಸಂಭ್ರಮ-೨೦೨೬ ಎಂಬ ಶೀರ್ಷಿಕೆಯಡಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಆಯೋಜಿಸಿದೆ.
ಈ ವೇದಿಕೆಯಲ್ಲಿ ಕೋಟದ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಸಂಘಟನೆಗೆ ಜೈ ಕುಂದಾಪುರ ಸೇವಾ ಪುರಸ್ಕಾರ ನೀಡಿ ಗೌರವಿಸಲಿದೆ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಮಾಜಸೇವಕ ಕೋಟ ಶ್ರೀಕಾಂತ್ ಶೆಣೈ,ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ಧಾರ್ಮಿಕ ಮುಖಂಡ ಕೆ.ಭಾಸ್ಕರ್ ಸ್ವಾಮಿ ಇವರುಗಳಿಗೆ ವಿಶೇಷ ಅಭಿನಂದನೆ ಹಾಗೂ ಅಶಕ್ತರಿಗೆ ನೆರವು,ವಿಶೇಷ ಚೇತನರಿಗೆ ಕಿಟ್ ವಿತರಣೆ,ಸಾಂಸ್ಕöÈತಿಕ ಕಾರ್ಯಕ್ರಮ, ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ನಾಟಕ ಬ್ರಹ್ಮ ರಕ್ಕಸೆ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಮುಖರಾದ ಪುಂಡಲಿಕ ಮೊಗವೀರ,ಜಯರಾಜ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ.ಮಾ.೯ ಜೈ ಕುಂದಾಪುರ ಪುರಸ್ಕಾರ

karavalivaninews@gmail.com
Copyright - 2022webnewskannada news wedsite. All rights reserved. ನಮ್ಮ ಈ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಉಡುಪಿ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಸುದ್ದಿ ವಾಹಿನಿ. ಇದು 2009ರಲ್ಲಿ ಆರಂಭವಾದ ವೆಬ್ ನ್ಯೂಸ್ ಕನ್ನಡ ಸದಾ ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಯಶಸ್ವಿಯಾಗಿದೆ ವೆಬ್ ನ್ಯೂಸ್ ಕನ್ನಡ ಅತ್ಯಂತ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮತ್ತು ನೊಂದವರ ಧ್ವನಿಯಾಗಿ, ಸಮಾಜದಲ್ಲಿರುವ ದೋಷಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುವಲ್ಲಿ ವೆಬ್ ನ್ಯೂಸ್ ಕನ್ನಡ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ನೀಡುವ ವೆಬ್ ನ್ಯೂಸ್ ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತಿದೆ. ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ gmail-karavalivaninews@gmail.com
http://webnewskannada.com

Leave a Reply

Your email address will not be published. Required fields are marked *