webnews kannada

ಬ್ರಹ್ಮಾವರ: ಬಿಜೆಪಿ ಗ್ರಾಮಾಂತರ ಯುವ ಮೋರ್ಚಾದಿಂದ ಭವ್ಯ ‘ಅಟಲ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಮಾಚ್‌ 14, 15 ರಂದು

ಬ್ರಹ್ಮಾವರ: ಬಿಜೆಪಿ ಗ್ರಾಮಾಂತರ ಯುವ ಮೋರ್ಚಾದಿಂದ ಭವ್ಯ ‘ಅಟಲ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ಮಾಚ್‌ 14, 15 ರಂದು
​ಬ್ರಹ್ಮಾವರ: ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ಯುವ ಮೋರ್ಚಾ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರ ನೇತೃತ್ವದಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ “ಅಟಲ್ ಟ್ರೋಫಿ” 90 ಗಜಗಳ ಕ್ರಿಕೆಟ್ ಪಂದ್ಯಾಟವನ್ನು ಮಾರ್ಚ್ 14 ಮತ್ತು 15 ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ತಿಳಿಸಿದರು.

​ಗುರುವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಪಕ್ಷ ಸಂಘಟನೆ ಹಾಗೂ ಯುವಶಕ್ತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಉಡುಪಿ ಗ್ರಾಮಾಂತರ ಮಂಡಲದ 13 ಪಂಚಾಯತ್ ವ್ಯಾಪ್ತಿಯ ಯುವ ಕಾರ್ಯಕರ್ತರಿಗಾಗಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಪಂದ್ಯಾಟದ ಉದ್ಘಾಟನೆ ನೆರವೇರಲಿದ್ದು, ಭಾನುವಾರ ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ,” ಎಂದರು.
​ಕ್ರೀಡಾಕೂಟದ ಯಶಸ್ಸಿಗಾಗಿ ಈಗಾಗಲೇ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಪಂದ್ಯಾಟದ ಸಂಚಾಲಕ ಪ್ರದೀಪ್ ಕುಂದರ್ ಅವರ ನೇತೃತ್ವದಲ್ಲಿ 13 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕಾರ್ನರ್ ಮೀಟಿಂಗ್‌ಗಳನ್ನು ನಡೆಸಲಾಗಿದೆ. ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಗೌತಮ್ ಮತ್ತು ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ ಅವರ ತಂಡವು ಕ್ಷೇತ್ರದಾದ್ಯಂತ ಕ್ರೀಡಾ ಸಂಚಲನ ಮೂಡಿಸಿದೆ ಎಂದು ಹೇಳಿದರು.

​ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರದೀಪ್ ಕುಂದರ್, ಗೌತಮ್ ಅಗ್ರಹಾರ, ದೇವಾನಂದ್ ನಾಯಕ್, ಸುಶಾಂತ್ ಪೂಜಾರಿ, ಆಯುಷ್ ಪೂಜಾರಿ, ಮಿಥುನ್, ಸಚಿನ್ ಮೊದಲಾದವರು ಉಪಸ್ಥಿತರಿದ್ದರು.

karavalivaninews@gmail.com
Copyright - 2022webnewskannada news wedsite. All rights reserved. ನಮ್ಮ ಈ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಉಡುಪಿ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಸುದ್ದಿ ವಾಹಿನಿ. ಇದು 2009ರಲ್ಲಿ ಆರಂಭವಾದ ವೆಬ್ ನ್ಯೂಸ್ ಕನ್ನಡ ಸದಾ ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಯಶಸ್ವಿಯಾಗಿದೆ ವೆಬ್ ನ್ಯೂಸ್ ಕನ್ನಡ ಅತ್ಯಂತ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮತ್ತು ನೊಂದವರ ಧ್ವನಿಯಾಗಿ, ಸಮಾಜದಲ್ಲಿರುವ ದೋಷಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುವಲ್ಲಿ ವೆಬ್ ನ್ಯೂಸ್ ಕನ್ನಡ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ನೀಡುವ ವೆಬ್ ನ್ಯೂಸ್ ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತಿದೆ. ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ gmail-karavalivaninews@gmail.com
http://webnewskannada.com

Leave a Reply

Your email address will not be published. Required fields are marked *