ಉಜಿರೆ : ಉದ್ಯಮದಲ್ಲಿ ಯಶಸ್ಸು ಸಾಧಿಸಲು ನಿರಂತರ ಪರಿಶ್ರಮ, ದೃಢ ಸಂಕಲ್ಪ ಹಾಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಅತ್ಯಗತ್ಯ ಎಂದು ಉಜಿರೆಯ ಸಂಧ್ಯಾ ಟ್ರೇಡರ್ಸ್ನ ಮಾಲಕರು ಹಾಗೂ ಸಿರಿ ಸಂಸ್ಥೆಯ ನಿರ್ದೇಶಕರಾದ *ಶ್ರೀ ರಾಜೇಶ್ ಪೈ* ಅವರು ಹೇಳಿದರು. ಅವರು ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ಆಯೋಜಿಸಲಾದ *ಉದ್ಯಮಶೀಲತಾಭಿವೃದ್ಧಿ* ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು. ತಮ್ಮ ಉದ್ಯಮ ಪಯಣದ ಅನುಭವಗಳನ್ನು ಹಂಚಿಕೊಂಡ ಅವರು, ಉದ್ಯಮದ […]
Like this:
Like Loading...
ಅಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 79 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದರು. 386 ಇನ್ನಿಂಗ್ಸ್ಗಳಲ್ಲಿ 16,137 ರನ್ ಗಳಿಸುವ ಮೂಲಕ ಅವರು ವೀರೇಂದ್ರ ಸೆಹ್ವಾಗ್ ಅವರ ದಾಖಲೆ (16,119 ರನ್) ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಆಟಗಾರರಾದರು. ಜೊತೆಗೆ ಭಾರತದ ಪರ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏಕದಿನ ಕ್ರಿಕೆಟ್ನಲ್ಲಿ 1,100 ಬೌಂಡರಿ ಬಾರಿಸಿ ಅಪರೂಪದ ಮೈಲಿಗಲ್ಲನ್ನು ತಲುಪಿದರು
Like this:
Like Loading...
SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ.. SBI ತನ್ನ ಖಾತೆದಾರರಿಗೆ ಮಹತ್ವದ ಅಲರ್ಟ್ ನೀಡಿದೆ. UPI, IMPS, YONO, , NEFT, ಮತ್ತು RTGS ನಂತಹ ಸೇವೆಗಳು ಇಂದು ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:05 ರವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಮೆಂಟೆನನ್ಸ್ ಕಾರಣದಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ. ಗ್ರಾಹಕರು UPI Lite ಮತ್ತು ATMಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಸೂಚಿಸಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
Like this:
Like Loading...