webnews kannada

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ” ಮಹಿಳಾ ಸಬಲೀಕರಣ, ಯೋಗ ಧ್ಯಾನ ಕುರಿತು ಉಪನ್ಯಾಸ ಕಾರ್ಯಕ್ರಮ

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ವಿದ್ಯಾರ್ಥಿಗಳಿಗೆ, ಕಾಲೇಜಿನ “ಮಹಿಳಾ ವೇದಿಕೆ’ ವತಿಯಿಂದ “”ಮಹಿಳಾ ಸಬಲೀಕರಣ ಹಾಗೂ ಯೋಗ ಧ್ಯಾನದ ಮೂಲಕ ಮಾನಸಿಕ ಒತ್ತಡ ನಿರ್ವಹಣೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ “ಅರ್ಟ್ ಆಫ್ ಲಿವಿಂಗ್ ಟ್ರೈನರ್” ಶ್ರೀಮತಿ ಶೈಲಾಜ ಕೃಷ್ಣನಾನಂದ ಇವರು ವಹಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಯೋಗವು ದೇಹ – ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ, ನಿಯಮಿತ ಯೋಗಾಭ್ಯಾಸದಿಂದ ನರಮಂಡಲ […]

webnews kannada

ಭಜನಾ ಗುರು ಪ್ರಕಾಶ್ ಕುಲಾಲ್ ಕುಟುಂಬಕ್ಕೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತದಿಂದ ಒಂದು ಲಕ್ಷ ರೂ ಸಹಾಯಧನ

ಕೋಟ, ಎ.4: ಭಜನಾ ಕ್ಷೇತ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ ಉಡುಪಿ ಜಿಲ್ಲಾ ಭಜನಾ ಪರಿಷತ್ ಮಾಜಿ ಅಧ್ಯಕ್ಷ ಪ್ರಕಾಶ್ ಕುಲಾಲ್ ಇತ್ತೀಚೆಗೆ ನಿಧನರಾಗಿದ್ದು ಅವರ ಸಾಂತ್ವನ ನಿಧಿಗೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತ ತಂಡ ಒಂದು ಲಕ್ಷ ರೂ ಸಹಾಯಧನ ಹಸ್ತಾಂತರಿಸಿತು. ಮಾಜಿ ಶಾಸಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ ಸಹಾಯಧನ ಹಸ್ತಾಂತರಿಸಿ ಮಾತನಾಡಿ, ಯುವ ಜನಾಂಗ ಭಜನೆಯಲ್ಲಿ ತೊಡಗಿಸಿಕೊಳ್ಳುವುದು ತೀರ ಅಪರೂಪವಾಗಿರುವಾಗ ಚಿಕ್ಕ ವಯಸ್ಸಿನಲ್ಲಿ ಐವತ್ತಕ್ಕೂ ಹೆಚ್ಚು […]

webnews kannada

2-3 ವಾರಗಳಲ್ಲಿ ಭೀಕರ ದಾಳಿ ನಡೆಸಲಿದ್ದೇವೆ: ಟ್ರಂಪ್

2-3 ವಾರಗಳಲ್ಲಿ ಭೀಕರ ದಾಳಿ ನಡೆಸಲಿದ್ದೇವೆ: ಟ್ರಂಪ್ ಇರಾನ್‌ನೊಂದಿಗಿನ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ‘ಇನ್ನು 2-3 ವಾರಗಳಲ್ಲಿ ಇರಾನ್ ಮೇಲೆ ಉಗ್ರದಾಳಿ ನಡೆಸಲಿದ್ದೇವೆ. ಈಗಾಗಲೇ ಅವರ ನೌಕಾಪಡೆ, ವಾಯುಪಡೆ ಧ್ವಂಸಗೊಳಿಸಿದ್ದೇವೆ. ಪ್ರಮುಖ ನಾಯಕರನ್ನು ಮಟ್ಟ ಹಾಕಿದ್ದೇವೆ. ಇರಾನ್ ಒಪ್ಪಂದಕ್ಕೆ ಒಪ್ಪದಿದ್ದರೆ, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತೇವೆ. ಹಾರ್ಮುಜ್‌ನಿಂದ ನಮಗೆ ಇಂಧನದ ಅಗತ್ಯವಿಲ್ಲ. ಇತರ ರಾಷ್ಟ್ರಗಳು ಬಯಸಿದರೆ, ಅದನ್ನು ತಾವೇ ತೆಗೆದುಕೊಂಡು ಹೋಗಲಿ’ ಎಂದಿದ್ದಾರೆ.

webnews kannada

SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ.

SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ.. SBI ತನ್ನ ಖಾತೆದಾರರಿಗೆ ಮಹತ್ವದ ಅಲರ್ಟ್ ನೀಡಿದೆ. UPI, IMPS, YONO, , NEFT, ಮತ್ತು RTGS ನಂತಹ ಸೇವೆಗಳು ಇಂದು ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:05 ರವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್‌ ತಿಳಿಸಿದೆ. ಮೆಂಟೆನನ್ಸ್ ಕಾರಣದಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ. ಗ್ರಾಹಕರು UPI Lite ಮತ್ತು ATMಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಸೂಚಿಸಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.