
SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ..
SBI ತನ್ನ ಖಾತೆದಾರರಿಗೆ ಮಹತ್ವದ ಅಲರ್ಟ್ ನೀಡಿದೆ. UPI, IMPS, YONO, , NEFT, ಮತ್ತು RTGS ನಂತಹ ಸೇವೆಗಳು ಇಂದು ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:05 ರವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಮೆಂಟೆನನ್ಸ್ ಕಾರಣದಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ. ಗ್ರಾಹಕರು UPI Lite ಮತ್ತು ATMಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಸೂಚಿಸಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
