webnews kannada

MLA ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್

ಬಂಟ್ವಾಳ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋ ಬಳಸಿ ಅವಹೇಳನಕಾರಿ ಬರಹಗಳನ್ನು ಹಾಗೂ ಸುಳ್ಳು ಅಪಪ್ರಚಾರ ನಡೆಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್‌ ನಲ್ಲಿ ಪ್ರಚಾರ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಪೋಟೋವನ್ನು ಹಾಕಿ ಇವರು ನಮ್ಮನ್ನಗಲಿದ್ದಾರೆಂದು ಬರೆದು ಪೋಸ್ಟ್ ಹಾಕಿದ್ದಲ್ಲದೆ, ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದು ಬಿಜೆಪಿಯನ್ನು ಅಣಕಿಸಲಾಗಿದ್ದು, ಘಟನೆ ಬಗ್ಗೆ ಸುಳ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.

ಬಿಲ್ಲವ ಸಂದೇಶ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಚಿತ್ರ ಬಳಸಿ ಅವರನ್ನು ನಿಂದಿಸಿ, ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ.

ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನು ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಬ್ಲೂಜೇಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ” ಅಂತ ಪೋಸ್ಟ್ ಹಾಕಲಾಗಿದೆ.

karavalivaninews@gmail.com
Copyright - 2022webnewskannada news wedsite. All rights reserved. ನಮ್ಮ ಈ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಉಡುಪಿ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಸುದ್ದಿ ವಾಹಿನಿ. ಇದು 2009ರಲ್ಲಿ ಆರಂಭವಾದ ವೆಬ್ ನ್ಯೂಸ್ ಕನ್ನಡ ಸದಾ ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಯಶಸ್ವಿಯಾಗಿದೆ ವೆಬ್ ನ್ಯೂಸ್ ಕನ್ನಡ ಅತ್ಯಂತ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮತ್ತು ನೊಂದವರ ಧ್ವನಿಯಾಗಿ, ಸಮಾಜದಲ್ಲಿರುವ ದೋಷಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುವಲ್ಲಿ ವೆಬ್ ನ್ಯೂಸ್ ಕನ್ನಡ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ನೀಡುವ ವೆಬ್ ನ್ಯೂಸ್ ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತಿದೆ. ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ gmail-karavalivaninews@gmail.com
http://webnewskannada.com

Leave a Reply

Your email address will not be published. Required fields are marked *