webnews kannada

Bangladesh Unrest: ಬಾಂಗ್ಲಾದಲ್ಲಿ ಮುಂದುವರಿದ ಹಿಂದುಗಳ ನರಮೇಧ

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನರಮೇಧ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ಯುವಕರನ್ನು ಹತ್ಯೆ ಮಾಡಲಾಗಿದೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲ್ಲಾದ ಚೋರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮೋನಿ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮೋನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ದಾಳಿ ಹಠಾತ್ತನೆ ನಡೆದಿದ್ದು, ದಾಳಿಕೋರರು ಕೂಡಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜಧಾನಿ ಢಾಕಾಗೆ ಸಮೀಪದಲ್ಲಿರುವ ಈ ಘಟನೆ ಇನ್ನಷ್ಟು ಆಘಾತಕಾರಿಯಾಗಿದೆ.

ಈ ಹತ್ಯೆ 18 ದಿನಗಳಲ್ಲಿ ನಡೆದ 6ನೇ ಹಿಂದೂ ವ್ಯಕ್ತಿಯ ಕೊಲೆಯಾಗಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ, ಜಶೋರ್ ಜಿಲ್ಲೆಯ ಮಣಿರಾಂಪುರ ಉಪಜಿಲ್ಲಾದ ಕೊಪಾಲಿಯಾ ಬಜಾರ್‌ನಲ್ಲಿ 45 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ರಾಣಾ ಪ್ರತಾಪ್ ಐಸ್ ಕಾರ್ಖಾನೆಯನ್ನು ಹೊಂದಿದ್ದರು. ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿದ್ದರು.

ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಕೆಲವು ಪುರುಷರು ಬೈಕ್​ನಲ್ಲಿ ಬಂದು ಅವರನ್ನು ಕಾರ್ಖಾನೆಯಿಂದ ಹೊರಗೆಳೆದು, ಒಂದು ಗಲ್ಲಿಗೆ ಕರೆದೊಯ್ದು ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿದ್ದರು. ಅಷ್ಟೇ ಅಲ್ಲದೆ ಕುತ್ತಿಗೆ ಕೊಯ್ದು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ

karavalivaninews@gmail.com
Copyright - 2022webnewskannada news wedsite. All rights reserved. ನಮ್ಮ ಈ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಉಡುಪಿ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಸುದ್ದಿ ವಾಹಿನಿ. ಇದು 2009ರಲ್ಲಿ ಆರಂಭವಾದ ವೆಬ್ ನ್ಯೂಸ್ ಕನ್ನಡ ಸದಾ ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಯಶಸ್ವಿಯಾಗಿದೆ ವೆಬ್ ನ್ಯೂಸ್ ಕನ್ನಡ ಅತ್ಯಂತ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮತ್ತು ನೊಂದವರ ಧ್ವನಿಯಾಗಿ, ಸಮಾಜದಲ್ಲಿರುವ ದೋಷಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುವಲ್ಲಿ ವೆಬ್ ನ್ಯೂಸ್ ಕನ್ನಡ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ನೀಡುವ ವೆಬ್ ನ್ಯೂಸ್ ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತಿದೆ. ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ gmail-karavalivaninews@gmail.com
http://webnewskannada.com

Leave a Reply

Your email address will not be published. Required fields are marked *