
ಭಾರತದ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಆಚರಣೆಗಳಿವೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯ ಚವಲಕರ ಬಳಿ ಇರುವ ‘ಕೊಟ್ಟಂಕುಳಂಗರ ಶ್ರೀದೇವಿ ದೇವಾಲಯ’ದ ಸಂಪ್ರದಾಯ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯಲು ಬಯಸುವ ಪುರುಷರು ಸಾಮಾನ್ಯ ಉಡುಪುಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಬದಲಿಗೆ,

ಸೀರೆಯನ್ನುಟ್ಟು, ಸಂಪೂರ್ಣವಾಗಿ ಮಹಿಳೆಯಂತೆ ಶೃಂಗಾರಗೊಂಡ ನಂತರವೇ ದೇವಿಯ ಸನ್ನಿಧಿ ಪ್ರವೇಶಿಸಲು ಅವಕಾಶ ಸಿಗುತ್ತದೆ.




