
ಒಂದು ರೂಪಾಯಿಗೆ ಸಿಮ್ ಹೌದು ಕೇವಲ ಸಿಮ್ ಮಾತ್ರ ಅಲ್ಲ 24 ದಿನಗಳ ವ್ಯಾಲಿಡಿಟಿ ಕೂಡ ಇರುತ್ತದೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) ಹೊಸ ಗ್ರಾಹಕರನ್ನು ಆಕರ್ಷಿಸುವ ವಿಶೇಷ ಆಫರ್ನ್ನು ಪರಿಚಯಿಸಿದೆ. ‘BSNL Freedom 2.0’ ಯೋಜನೆಯಡಿ ಅರ್ಹ ಗ್ರಾಹಕರು ಕೇವಲ 1 ರೂಪಾಯಿ ಪಾವತಿಸಿ ಹೊಸ ಬಿಎಸ್ಎನ್ಎಲ್ ಸಿಮ್ ಸಂಪರ್ಕವನ್ನು ಪಡೆಯಬಹುದು.
ಈ ವಿಶೇಷ ಆಫರ್ನ ಅವಧಿಯನ್ನು ನವೆಂಬರ್ 9, 2026ರವರೆಗೆ ವಿಸ್ತರಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಹೊಸ ಮೊಬೈಲ್ ಸಂಪರ್ಕ ಪಡೆಯಲು ಬಯಸುವ ಗ್ರಾಹಕರಿಗೆ ಕರೆ, ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯಗಳೊಂದಿಗೆ ಈ ಯೋಜನೆ ಉತ್ತಮ ಜನರಿಗೆ ಉತ್ತಮವಾದ ಅವಕಾಶವನ್ನು ಒದಗಿಸುತ್ತದೆ
BSNL Freedom 2.0 ಯೋಜನೆಯಡಿ ಹೊಸ ಗ್ರಾಹಕರು ಕೇವಲ 1 ರೂಪಾಯಿಗೆ ಹೊಸ ಸಿಮ್ ಸಂಪರ್ಕ ಪಡೆಯಬಹುದು. ಸಿಮ್ ಜೊತೆಗೆ 24 ದಿನಗಳ ಸೇವಾ ಮಾನ್ಯತೆ ಕೂಡ ದೊರೆಯಲಿದೆ ಹಾಗಾದರೆ ಈ ಒಂದು ಸೌಲಭ್ಯದೊಂದಿಗೆ ಏನೆಲ್ಲಾ ಒಳಗೊಂಡಿರುತ್ತದೆ ಎಂದು ನೀವು ತಿಳಿದುಕೊಳ್ಳಬೇಕೆ ಹಾಗಾದರೆ ಬನ್ನಿ ತಿಳಿದುಕೊಳ್ಳೋಣ
ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1GB ಹೈ-ಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ಗಳ ಸೌಲಭ್ಯ ಲಭ್ಯವಾಗುತ್ತದೆ. ಹೊಸ ಗ್ರಾಹಕರಿಗೆ ಈ ಆಫರ್ ನವೆಂಬರ್ 9, 2026ರವರೆಗೆ ಲಭ್ಯವಿರಲಿದೆ.
24 ದಿನಗಳ ಅವಧಿಯಲ್ಲಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಬಳಸಿಕೊಂಡರೆ ಒಟ್ಟು 24GB ಡೇಟಾ ಹಾಗೂ 2,400 ಎಸ್ಎಂಎಸ್ಗಳ ಲಾಭ ಪಡೆಯಬಹುದು. ಆದರೆ, ಪ್ರತಿದಿನದ ಡೇಟಾ ಮಿತಿ ಹಾಗೂ ಇತರ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಬಿಎಸ್ಎನ್ಎಲ್ 1 ರೂಪಾಯಿ ಸಿಮ್ ಆಫರ್ ಮುಖ್ಯವಾಗಿ ಹೊಸ ಬಿಎಸ್ಎನ್ಎಲ್ ಸಂಪರ್ಕ ಪಡೆಯುವ ಗ್ರಾಹಕರಿಗಾಗಿ ರೂಪಿಸಲಾಗಿದೆ. ಆದರೆಈಗಾಗಲೇ ಬಿಎಸ್ಎನ್ಎಲ್ ಸೇವೆ ಬಳಸುತ್ತಿರುವ ಗ್ರಾಹಕರು ತಮ್ಮ ಹಳೆಯ ಸಂಖ್ಯೆಗೆ ಸಾಮಾನ್ಯ ರೀಚಾರ್ಜ್ ಮಾಡುವ ಮೂಲಕ ಈ ಆಫರ್ ಪಡೆಯಲು ಸಾಧ್ಯವಾಗುವುದಿಲ್ಲ. ಈ ಯೋಜನೆ ಹೊಸ ಸಂಪರ್ಕಗಳಿಗೆ ಮಾತ್ರ ಅನ್ವಯಿಸುತ್ತದೆ.
ಆಫರ್ ಪಡೆಯುವ ಮೊದಲು ಗ್ರಾಹಕರು ಅರ್ಹತಾ ಮಾನದಂಡಗಳು ಹಾಗೂ ಅನ್ವಯವಾಗುವ ಷರತ್ತುಗಳನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ಈ ಆಫರ್ ಪಡೆಯಲು ಆಸಕ್ತರು ತಮ್ಮ ಸಮೀಪದ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ ಬಿಎಸ್ಎನ್ಎಲ್ ಸಿಮ್ ಮಾರಾಟಗಾರರನ್ನು ಸಂಪರ್ಕಿಸಬಹುದು. ಈಗ ಇರುವ ಡಾಟಾ ರಿಚಾರ್ಜ್ ಹೋಲಿಸಿದರೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು
