
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ನಿಗದಿಪಡಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದಾಗ್ಯೂ, ಶೈಕ್ಷಣಿಕ ಒತ್ತಡ ಹಾಗೂ ಹೆಚ್ಚುತ್ತಿರುವ ಪುಸ್ತಕಗಳ ಸಂಖ್ಯೆಯಿಂದಾಗಿ ಶಾಲಾ ಚೀಲಗಳ ತೂಕವು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಶಾಲಾ ಮಕ್ಕಳಿಗೆ ದೊಡ್ಡ ಹೊರೆಯಾಗುತ್ತಿದೆ ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಈ ಸವಾಲನ್ನು ಎದುರಿಸಲು ಕೇರಳ ಸರ್ಕಾರವು ಪ್ರಮುಖ ಹೆಜ್ಜೆ ಇಟ್ಟಿದ್ದು, ಮಕ್ಕಳ ಬೆನ್ನಿನ ಹೊರೆಯನ್ನು ತಗ್ಗಿಸಲು ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ.
ಶಾಲಾ ಬ್ಯಾಗ್ ತೂಕ ನಿಯಂತ್ರಣಕ್ಕೆ ಕೇರಳ ಸರ್ಕಾರದ ತುರ್ತು ಸಭೆ:
ಕೈಪಮಂಗಲಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪರವಾಗಿ ಸಿಪಿಐ ಶಾಸಕ ಕೆ.ಕೆ. ವಲ್ಸರಾಜ್ ಅವರು ವಿಧಾನಸಭೆಯಲ್ಲಿ ಮಂಡಿಸಿದ ಮನವಿಗೆ ಸಾಮಾನ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಸೂಕ್ತವಾಗಿ ಸ್ಪಂದಿಸಿದ್ದಾರೆ. ಶಾಲಾ ಚೀಲಗಳ ಅತಿಯಾದ ತೂಕದಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಆರೋಗ್ಯ ಮತ್ತು ಶೈಕ್ಷಣಿಕ ತೊಂದರೆಗಳನ್ನು ಶಮನಗೊಳಿಸಲು ನವೆಂಬರ್ 24 ರಂದು ರಾಜ್ಯ ಮಟ್ಟದ ಸಭೆಯನ್ನು ನಿಗದಿಪಡಿಸಲಾಗಿದೆ
ಪಠ್ಯಪುಸ್ತಕಗಳ ಮುದ್ರಣ ಮತ್ತು ವಿತರಣೆಯಲ್ಲಿ ಹೊಸ ಪ್ರಯೋಗಗಳು:
ಶಾಲಾ ಚೀಲಗಳ ತೂಕವನ್ನು ಕಡಿಮೆ ಮಾಡುವ ವಿಷಯವು ಈಗಾಗಲೇ ಶಿಕ್ಷಣ ಇಲಾಖೆಯ ಪರಿಗಣನೆಯಲ್ಲಿದ್ದು, ಪಠ್ಯಪುಸ್ತಕಗಳ ವಿನ್ಯಾಸ ಹಾಗೂ ಮುದ್ರಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಆಲೋಚಿಸಲಾಗಿದೆ. ಇಡೀ ವರ್ಷಕ್ಕೆ ಒಂದೇ ದಪ್ಪ ಪುಸ್ತಕ ನೀಡುವ ಬದಲು ಮಾಸಿಕ ಅಥವಾ ಅರ್ಧವಾರ್ಷಿಕ ಆಧಾರದ ಮೇಲೆ ಪಠ್ಯಕ್ರಮವನ್ನು ವಿಭಜಿಸಿ ಸಣ್ಣ ಪುಸ್ತಕಗಳನ್ನು ಮುದ್ರಿಸುವುದು ಸರ್ಕಾರದ ಮುಖ್ಯ ಯೋಜನೆಯಾಗಿದೆ. ಇದರ ಜೊತೆಗೆ, ಪುಸ್ತಕಗಳ ತೂಕವನ್ನು ಮತ್ತಷ್ಟು ತಗ್ಗಿಸಲು ಹಗುರವಾದ ಕಾಗದವನ್ನು (Lightweight Paper) ಬಳಸುವ ಸಾಧ್ಯತೆಗಳ ಕುರಿತು ಇಲಾಖೆ ಪರಿಶೀಲಿಸುತ್ತಿದೆ. ಇದರಿಂದ ಶಾಲಾ ಮಕ್ಕಳು ಮತ್ತು ಪೋಷಕರು ಖುಷಿಪಡುವ ವಿಷಯವಾಗಿದೆ
