ನಿಶ್ಚಯಿಸಿದ್ದ ವರನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಗಳ ತಲೆಗೆ ಗುಂಡು ಹಾರಿಸಿದ-webnews Kannada

ಲಕ್ನೋ: ತಂದೆ ನಿಶ್ಚಯಿಸಿದ್ದ ವರನನ್ನು ಮದುವೆಯಾಗಲು ನಿರಾಕರಿಸಿ, ತಾನು ಪ್ರೀತಿಸಿದ್ದ ಹುಡುಗನನ್ನು ಮದುವೆಯಾಗುವುದಾಗಿ ತಿಳಿಸಿದ ಒಂದೇ ಒಂದು ಕಾರಣಕ್ಕೆ 19 ವರ್ಷದ ಮಗಳು ಮಲಗಿದ್ದಾಗ ತಂದೆಯೇ ಆಕೆಯ ತಲೆಗೆ ಗನ್‌ ಇಟ್ಟು ಶೂಟ್‌ ಮಾಡಿ ಕೊಲೆಗೆ ಯತ್ನಿಸಿರುವ ಭೀಕರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಭೊಂಗಾವ್ ಪಟ್ಟಣದಲ್ಲಿ ಅ.19ರಂದು ಸೋಮವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್‌ ಆಕೆ ಬಚಾವ್‌ ಆಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗೆ ತಂದೆಯಿಂದಲೇ ಗುಂಡಿನ ದಾಳಿಗೆ ಒಳಗಾದ ಯುವತಿಯನ್ನು 19 ವರ್ಷದ ಶಾಜಿಯಾ ಎಂದು ಗುರುತಿಸಲಾಗಿದ್ದು, 49 ವರ್ಷದ ತಂದೆ ಆಸಿನ್‌ ಖಾನ್ ಈ ಕೃತ್ಯ ಎಸಗಿದ್ದಾನೆ. ಸದ್ಯ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಈ ಶಾಜಿಯಾ ಎಂಬಾಕೆಯನ್ನು ಆರಂಭದಲ್ಲಿ ಅಲ್ಲಿನ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಬಳಿಕ ಸೈಫೈ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಸಂಪೂರ್ಣ ವಿವರ

19 ವರ್ಷದ ಶಾಜಿಯ ಎಂಬ ಈಕೆಗೆ ವ್ಯಕ್ತಿಯೊಬ್ಬನೊಂದಿಗೆ ಪ್ರೇಮ ಸಂಬಂಧವಿದ್ದು, ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ಕೂಲಿ ಕಾರ್ಮಿಕನಾಗಿರುವ ತಂದೆ ಆಸಿನ್‌ ಖಾನ್‌ ಈಕೆಗೆ ನವೆಂಬರ್‌ 19ರಂದು ಬೇರೋಬ್ಬ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಲು ನಿಶ್ಚಯಿಸಿದ್ದಾರೆ. ಈ ವಿಚಾರಕ್ಕೆ ಜಗಳ ಆಗಿದ್ದು, ಶಾಜಿಯಾ ತನ್ನ ತಂದೆ ನಿಶ್ಚಯಿಸಿದ ಹುಡುಗನನ್ನು ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದು, ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ತಿಳಿಸಿದ್ದು, ಹಠಕ್ಕೆ ಬಿದ್ದಿದ್ದಾಳೆ. ಇದರಿಂದಾಗಿ ಕುಪಿತನಾಗಿರುವ ತಂದೆ ಆಕೆ ಮಲಗಿದ್ದಾಗ ಆಕೆಯ ತಲೆಗೆ ನೇರವಾಗಿ ಗನ್‌ ಇಟ್ಟಿದ್ದು, ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಹೀಗೆ ಏಕಾಏಕಿ ಮನೆಯಲ್ಲಿ ಗುಂಡಿನ ಶಬ್ದ ಕೇಳಿದ ಶಾಜಿಯಾ ತಾಯಿ ಖೇರುನಿಶಾ ಕೋಣೆಗೆ ಧಾವಿಸಿ ನೋಡಿದಾಗ ಗುಂಡಿನ ದಾಳಿಯಿಂದಾಗಿ ಗಾಯಗೊಂಡ ಮಗಳನ್ನು ನೋಡಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಆಕೆಯನ್ನು ಸೈಫೈ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಬಳಿಕ ತಾಯಿ ತನ್ನ ಪತಿ ಆಸಿನ್‌ ಖಾನ್‌ ವಿರುದ್ದ ಮಗಳನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *