ಉಜಿರೆ : ಗ್ರಾಮೀಣ ಸಮುದಾಯಗಳಿಗೆ ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳು (FLC-CRP) ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಎನ್‌ಆರ್‌ಎಲ್‌ಎಂ (NRLM) ವಿಭಾಗದ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ *ಶ್ರೀ ಹರಿಪ್ರಸಾದ್* ಅವರು ಹೇಳಿದರು. ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ಆಯೋಜಿಸಲಾದ ಹಣಕಾಸು ಸಾಕ್ಷರತಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (FLC-CRP) ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತರಬೇತಿ […]
webnews kannada
ಪಾಕ್ ಮೇಲೆ ಅಫ್ಘಾನ್ ಡೋನ್ ದಾಳಿ
ಪಾಕ್ ಮೇಲೆ ಅಫ್ಘಾನಿಸ್ತಾನ್ ದಾಳಿ ನಡೆಸಿದೆ. ಖೈಬರ್ ಪಸ್ತುಂಖ್ಯಾ, ಬಲೂಚಿಸ್ತಾನದಲ್ಲಿನ ISIS ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಡೋನ್ ದಾಳಿ ನಡೆಸಿದ್ದಾಗಿ ತಾಲಿಬಾನ್ ಘೋಷಿಸಿದೆ. ಗುಲಿಸ್ತಾನ್, ಶಾಂಕರ್ ಅಬ್, ಖಾಂಬರ್ ಖೇಲ್ ಪ್ರದೇಶಗಳಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸಗೊಳಿಸಲಾಗಿದ್ದು, ಆ ಸ್ಥಳಗಳಿಂದ ನಮ್ಮ ಮೇಲೆ ದಾಳಿಗೆ ಸಂಚು ರೂಪಿಸಲಾಗುತ್ತಿತ್ತು ಎಂದು ತಾಲಿಬಾನ್ ಹೇಳಿದೆ. ಇತ್ತೀಚೆಗೆ ಪಾಕ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ನಂಬಿದವರ ಕೈಬಿಡದ ಕಳಿಬೈಲು ಕೊರಗಜ್ಜ: ಕಳವಾದ ಚಿನ್ನದ ಒಡವೆಗಳು ಮೂರೇ ದಿನದಲ್ಲಿ ವಾಪಸ್!
ನಂಬಿದವರ ಕೈಬಿಡದ ಕಳಿಬೈಲು ಕೊರಗಜ್ಜ: ಕಳವಾದ ಚಿನ್ನದ ಒಡವೆಗಳು ಮೂರೇ ದಿನದಲ್ಲಿ ವಾಪಸ್! ಕೋಟ: ದೈವಶಕ್ತಿಯ ಪವಾಡಗಳು ಇಂದಿಗೂ ಜೀವಂತ ಎಂಬುದಕ್ಕೆ ಸಾಸ್ತಾನ ಕೆಳಬೆಟ್ಟು ಮೂಡುಹಡುವಿನ ಕಳಿಬೈಲು ಕೊರಗಜ್ಜನ ಸನ್ನಿಧಾನದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.ಮದುವೆ ಸಮಾರಂಭವೊಂದರ ಸಂದರ್ಭದಲ್ಲಿ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ದೈವದ ಮೊರೆ ಹೋದ ಮೂರೇ ದಿನಗಳಲ್ಲಿ ಪತ್ತೆಯಾಗುವ ಮೂಲಕ ಭಕ್ತರಲ್ಲಿ ಆಸ್ತಿಕತೆಯನ್ನು ಇಮ್ಮಡಿಗೊಳಿಸಿದೆ. ಘಟನೆಯ ಹಿನ್ನೆಲೆ:ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೋಡಿ ಕುಟುಂಬವೊಂದು ಏಪ್ರಿಲ್ 29ರಂದು ನೆರೆಮನೆಯ ಮದುವೆ ಸಮಾರಂಭಕ್ಕೆ ತೆರಳಿತ್ತು. […]
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ” ಮಹಿಳಾ ಸಬಲೀಕರಣ, ಯೋಗ ಧ್ಯಾನ ಕುರಿತು ಉಪನ್ಯಾಸ ಕಾರ್ಯಕ್ರಮ
ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ವಿದ್ಯಾರ್ಥಿಗಳಿಗೆ, ಕಾಲೇಜಿನ “ಮಹಿಳಾ ವೇದಿಕೆ’ ವತಿಯಿಂದ “”ಮಹಿಳಾ ಸಬಲೀಕರಣ ಹಾಗೂ ಯೋಗ ಧ್ಯಾನದ ಮೂಲಕ ಮಾನಸಿಕ ಒತ್ತಡ ನಿರ್ವಹಣೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ “ಅರ್ಟ್ ಆಫ್ ಲಿವಿಂಗ್ ಟ್ರೈನರ್” ಶ್ರೀಮತಿ ಶೈಲಾಜ ಕೃಷ್ಣನಾನಂದ ಇವರು ವಹಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಯೋಗವು ದೇಹ – ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ, ನಿಯಮಿತ ಯೋಗಾಭ್ಯಾಸದಿಂದ ನರಮಂಡಲ […]
ಭಜನಾ ಗುರು ಪ್ರಕಾಶ್ ಕುಲಾಲ್ ಕುಟುಂಬಕ್ಕೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತದಿಂದ ಒಂದು ಲಕ್ಷ ರೂ ಸಹಾಯಧನ
ಕೋಟ, ಎ.4: ಭಜನಾ ಕ್ಷೇತ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ ಉಡುಪಿ ಜಿಲ್ಲಾ ಭಜನಾ ಪರಿಷತ್ ಮಾಜಿ ಅಧ್ಯಕ್ಷ ಪ್ರಕಾಶ್ ಕುಲಾಲ್ ಇತ್ತೀಚೆಗೆ ನಿಧನರಾಗಿದ್ದು ಅವರ ಸಾಂತ್ವನ ನಿಧಿಗೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತ ತಂಡ ಒಂದು ಲಕ್ಷ ರೂ ಸಹಾಯಧನ ಹಸ್ತಾಂತರಿಸಿತು. ಮಾಜಿ ಶಾಸಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ ಸಹಾಯಧನ ಹಸ್ತಾಂತರಿಸಿ ಮಾತನಾಡಿ, ಯುವ ಜನಾಂಗ ಭಜನೆಯಲ್ಲಿ ತೊಡಗಿಸಿಕೊಳ್ಳುವುದು ತೀರ ಅಪರೂಪವಾಗಿರುವಾಗ ಚಿಕ್ಕ ವಯಸ್ಸಿನಲ್ಲಿ ಐವತ್ತಕ್ಕೂ ಹೆಚ್ಚು […]
2-3 ವಾರಗಳಲ್ಲಿ ಭೀಕರ ದಾಳಿ ನಡೆಸಲಿದ್ದೇವೆ: ಟ್ರಂಪ್
2-3 ವಾರಗಳಲ್ಲಿ ಭೀಕರ ದಾಳಿ ನಡೆಸಲಿದ್ದೇವೆ: ಟ್ರಂಪ್ ಇರಾನ್‌ನೊಂದಿಗಿನ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ‘ಇನ್ನು 2-3 ವಾರಗಳಲ್ಲಿ ಇರಾನ್ ಮೇಲೆ ಉಗ್ರದಾಳಿ ನಡೆಸಲಿದ್ದೇವೆ. ಈಗಾಗಲೇ ಅವರ ನೌಕಾಪಡೆ, ವಾಯುಪಡೆ ಧ್ವಂಸಗೊಳಿಸಿದ್ದೇವೆ. ಪ್ರಮುಖ ನಾಯಕರನ್ನು ಮಟ್ಟ ಹಾಕಿದ್ದೇವೆ. ಇರಾನ್ ಒಪ್ಪಂದಕ್ಕೆ ಒಪ್ಪದಿದ್ದರೆ, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತೇವೆ. ಹಾರ್ಮುಜ್‌ನಿಂದ ನಮಗೆ ಇಂಧನದ ಅಗತ್ಯವಿಲ್ಲ. ಇತರ ರಾಷ್ಟ್ರಗಳು ಬಯಸಿದರೆ, ಅದನ್ನು ತಾವೇ ತೆಗೆದುಕೊಂಡು ಹೋಗಲಿ’ ಎಂದಿದ್ದಾರೆ.
SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ.
SBI ಅಕೌಂಟ್ ಬಳಸುತ್ತಿದ್ದೀರಾ.. ಇನ್ನು ಸ್ವಲ್ಪ ಹೊತ್ತಿನಲ್ಲಿ.. SBI ತನ್ನ ಖಾತೆದಾರರಿಗೆ ಮಹತ್ವದ ಅಲರ್ಟ್ ನೀಡಿದೆ. UPI, IMPS, YONO, , NEFT, ಮತ್ತು RTGS ನಂತಹ ಸೇವೆಗಳು ಇಂದು ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:05 ರವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಮೆಂಟೆನನ್ಸ್ ಕಾರಣದಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ. ಗ್ರಾಹಕರು UPI Lite ಮತ್ತು ATMಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಸೂಚಿಸಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
IPL ಬ್ರಾಡ್‌ಕಾಸ್ಟ್ ಇಂಜಿನಿಯರ್ ನಿಧನ
IPL ಬ್ರಾಡ್‌ಕಾಸ್ಟ್ ಇಂಜಿನಿಯರ್ ನಿಧನ ENGಗೆ ಸೇರಿದ IPL ಬ್ರಾಡ್‌ಕಾಸ್ಟ್ ಇಂಜಿನಿಯರ್ ಜಾನ್ ವಿಲಿಯಂ (76) ನಿಧನರಾಗಿದ್ದಾರೆ. ಇದೆ ತಿಂಗಳ 29ರಂದು MI-KKR ಪಂದ್ಯ ನಂತರ ಅವರು ಹೋಟೆಲ್‌ಗೆ ತೆರಳಿದ್ದರು. ಮರುದಿನ ಕಾಲ್ ಮಾಡಿದರೂ ಪ್ರತಿಕ್ರಿಯೆ ಇಲ್ಲದ ಕಾರಣ, ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಜಾನ್ ನೆಲದ ಮೇಲೆ ಬೈದಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿಯಲ್ಲಿ ಯಾವುದೇ ಅನುಮಾನಾಸ್ಪದ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಗಮನಿಸಿ.. ಹೀಗಾದರೆ ನಿಮ್ಮ ರೇಷನ್ ಕಾರ್ಡ್ ರದ್ದು!
ಗಮನಿಸಿ.. ಹೀಗಾದರೆ ನಿಮ್ಮ ರೇಷನ್ ಕಾರ್ಡ್ ರದ್ದು! ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರವು ತಂತ್ರಜ್ಞಾನ ಆಧಾರಿತ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಅದರಂತೆ ಕುಟುಂಬದ ಸದಸ್ಯರಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಕುಟುಂಬದಲ್ಲಿ ಸ್ವಂತ ನಾಲ್ಕು ಚಕ್ರದ ವಾಹನ (ಟ್ರಾಕ್ಟರ್ ಹೊರತುಪಡಿಸಿ) ಇದ್ದರೆ, ಸತತ ಮೂರು ತಿಂಗಳುಗಳ ಕಾಲ ಪಡಿತರ ಪಡೆಯದಿದ್ದರೆ, ನಿಮಗೆ ಅದರ ಅಗತ್ಯವಿಲ್ಲ ಎಂದು ಪರಿಗಣಿಸಿ ರೇಷನ್ ಕಾರ್ಡ್ ರದ್ದುಪಡಿಸಲಾಗುತ್ತದೆ.
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ವಿದ್ಯಾರ್ಥಿಗಳಿಗೆ, ಕಾಲೇಜಿನ ರೆಡ್ ಕ್ರಾಸ್ ಸಂಘಟನೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ
ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ವಿದ್ಯಾರ್ಥಿಗಳಿಗೆ, ಕಾಲೇಜಿನ ರೆಡ್ ಕ್ರಾಸ್ ಸಂಘಟನೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಪ್ರಸಾದ್ ನೇತ್ರಾಲಯದಿಂದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯದ ಕಣ್ಣಿನ ವೈದ್ಯರಾದ ಡಾಕ್ಟರ್ ಆಶ್ರೀತ್ ಸಿದ್ದಣ್ಣ,ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ಕಣ್ಣಿನ ಬಗ್ಗೆ ಬಹಳಷ್ಟು ಜಾಗ್ರತೆ ವಹಿಸಬೇಕು. ನೋಡುವ ನೋಟವನ್ನು ಒಂದೇ ಕಡೆ ಬಹಳಷ್ಟು ಸಮಯ ದಿಟ್ಟಿಸದೆ, ಪ್ರತಿ 20 […]








