webnews kannada

ಬ್ರಹ್ಮಾವರ ಆಭರಣ ಜ್ಯುವೆಲ್ಲರ್ಸ್ ನಿಂದ ಯೋಧರಿಗೆ ಗೌರವ ಸನ್ಮಾನ.

ಕೋಟ: ಬ್ರಹ್ಮಾವರದ ಆಭರಣ ಜ್ಯುವೆಲ್ಲರ್ಸ್ ನ ಮಳಿಗೆಯಲ್ಲಿ ಸೈನಿಕ ದಿನಾಚರಣೆಯ ಸಂಭ್ರಮದಿಂದ ಆಚರಿಸಲಾಯಿತು.
ಮಳಿಗೆಯ ಪ್ರಬಂಧಕರಾದ ಗಣೇಶ್ ಪ್ರಭು ಅವರ ನೇತೃತ್ವದಲ್ಲಿ ಮಾಜಿ ಸೈನಿಕರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸನ್ಮಾನ ಸ್ವೀಕರಿಸಿದ ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಸುರೇಶ್ ಸಿ ರಾವ್ ಅವರು ಮಾತನಾಡಿ ಉಡುಪಿ ಜಿಲ್ಲೆಯ ಆಭರಣ ಜ್ಯುವೆಲ್ಲರ್ಸ್ ನವರು ಸೈನಿಕರನ್ನು ಗುರುತಿಸಿ ಅವರ ಕಾರ್ಯವನ್ನು ಗುರುತಿಸಿದ್ದು ತುಂಬಾ ವಿಶೇಷ ಸಂಗತಿಯಾಗಿದೆ. ಹಾಗೆಯೇ ದೇಶದ ರಕ್ಷಣೆಯಲ್ಲಿ ತೊಡಗಿರುವ ಎಲ್ಲಾ ಸೈನಿಕರನ್ನು ಕೂಡ ಸಂಸ್ಥೆಯವರು ಶ್ಲಾಘಿಸಿದ್ದು ಸಂತೋಷದ ವಿಚಾರವಾಗಿದೆ. ಸಂಸ್ಥೆಯು ತನ್ನ ವ್ಯವಹಾರದೊಂದಿಗೆ ಸೈನಿಕರನ್ನು ತನ್ನ ಅವಿಭಾಜ್ಯ ಅಂಗ ಎಂದು ತಿಳಿದು ಸನ್ಮಾನಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಸೈನಿಕರನ್ನು ಗುರುತಿಸುವ ಕೆಲಸ ನಿರಂತರತೆ ಸೇನೆಗೆ ಸೇರುವ ಯುವಕರನ್ನು ಪ್ರೋತ್ಸಾಹ ನೀಡಿ ಮುಂದಿನ ದಿನಗಳಲ್ಲಿ ಸೇನೆಗೆ ಸೇರುವುದಕ್ಕೆ ಹೊಸ ಆಯಾಮ ನೀಡಿದಂತೆ ತನ್ನ ವ್ಯವಹಾರದ ಜೊತೆಗೆ ದೇಶದ ರಕ್ಷಣೆಯೊಂದಿಗೆ ನಾವು ಕೂಡ ನಿಮ್ಮೊಂದಿಗೆ ಸದಾ ಇರುತ್ತೇವೆ ಎಂಬುದನ್ನು ಸಂಸ್ಥೆ ಮಾಡಿ ತೋರಿಸಿದೆ ಎಂದು ತಿಳಿಸಿದರು.

ಆಭರಣ ಮಳಿಗೆಯ ಪ್ರಬಂಧಕರಾದ ಗಣೇಶ್ ಪ್ರಭು ಹಾಗೂ ಆಭರಣ ಸಂಸ್ಥೆಯ ಕಟ್ಟಡದ ಮ್ಯಾನೇಜರ್ ರಾಘವೇಂದ್ರ ನಾಯಕ್ , ಮಳಿಗೆಯ ಸಚಿನ್ ಉಪಸ್ಥಿತರಿದ್ದರು.
ಆಭರಣ ಮಳಿಗೆಯ ಗಣೇಶ್ ಪ್ರಭು ವಂದನಾರ್ಪಣೆ ಸಲ್ಲಿಸಿ ಮಾಜಿ ಸೈನಿಕರಿಗೆ ಆರತಿ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸಿದರು.

karavalivaninews@gmail.com
Copyright - 2022webnewskannada news wedsite. All rights reserved. ನಮ್ಮ ಈ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಉಡುಪಿ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಸುದ್ದಿ ವಾಹಿನಿ. ಇದು 2009ರಲ್ಲಿ ಆರಂಭವಾದ ವೆಬ್ ನ್ಯೂಸ್ ಕನ್ನಡ ಸದಾ ಹೊಸ ಹೊಸ ಪ್ರಯತ್ನ ಮತ್ತು ಪರಿಕಲ್ಪನೆಗಳನ್ನು ಜನರ ಮುಂದಿಡುತ್ತ ವಿಶಾಲ ಹೃದಯಿಗಳಾದ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವೆಬ್ ನ್ಯೂಸ್ ಕನ್ನಡ ವೆಬ್ಸೈಟ್ ಯಶಸ್ವಿಯಾಗಿದೆ ವೆಬ್ ನ್ಯೂಸ್ ಕನ್ನಡ ಅತ್ಯಂತ ವೇಗವಾಗಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ ಎಂಬ ತನ್ನ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮತ್ತು ನೊಂದವರ ಧ್ವನಿಯಾಗಿ, ಸಮಾಜದಲ್ಲಿರುವ ದೋಷಗಳನ್ನು ಸರಿ ಪಡಿಸುವ ಕೆಲಸವನ್ನು ಮಾಡುವಲ್ಲಿ ವೆಬ್ ನ್ಯೂಸ್ ಕನ್ನಡ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ನೀಡುವ ವೆಬ್ ನ್ಯೂಸ್ ಕನ್ನಡ ಯಾವುದೇ ಘಟನೆಯಿರಲಿ, ಪ್ರಮುಖ ಸುದ್ದಿಯಿರಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿಸುತ್ತಿದೆ. ಇದು ವೆಬ್ ನ್ಯೂಸ್ ಕನ್ನಡ ಇದು ಕನ್ನಡಿಗರ ಸುದ್ದಿತಾಣ gmail-karavalivaninews@gmail.com
http://webnewskannada.com

Leave a Reply

Your email address will not be published. Required fields are marked *