
ಕೋಟ: ಈ ಸಮಾಜದಲ್ಲಿ ಯಾವುದೇ ವಸ್ತು ಕಳೆದುಕೊಂಡಾಗ ವೇಗವಾಗಿ ಮರೆತುಬಿಡುವ ಕಾಲದಲ್ಲಿ ಸಂತೋಷ್ ಮೇಷ್ಟ್ರ್ ಹೆಸರನ್ನು ಸದಾಕಾಲ ನೆನಪುಳಿಯುವಂತೆ ಮಾಡುವ ಪಂಚವರ್ಣ ಕಾರ್ಯವೈಕರಿಗೆ ಮೆಚ್ಚುಗೆ ಸೂಚಿಸುತ್ತೇನೆ ಎಂದು ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.

ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾಬಳಗ ಪಡುಕರೆ,ಜೈ ಹಿಂದ್ ಕ್ರಿಕೆಟಸ್೯ ಪಡುಕರೆ ಇವರ ಸಹಯೋಗದೊಂದಿಗೆ ನೆನಪಿನಂಗಳದಿ ಸಂತೋಷ್ ಮೇಷ್ಟ್ರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಸಾಹಿತ್ಯಿಕ ಬದುಕು ಸೇರಿದಂತೆ ಅವರ ವಿವಿಧ ಕ್ಷೇತ್ರಗಳ ಆಯಾಮಗಳ ಕಾರ್ಯವೈಕರಿಯನ್ನು ನೆನಪಿಸುವ ಅಥವಾ ಅದರ ಬಗ್ಗೆ ಅಧ್ಯಯನದ ಮೂಲಕ ಒಂದೆಡೆ ರೂಪುಗೊಳಿಸಿ ಅವರ ಹೆಸರಿನಲ್ಲಿ ಉದಯೋನ್ಮುಖ ಸಾಹಿತಿಗಳ ಗುರುತಿಸುವ ಯೋಚನೆಗೆ ಬಣ್ಣ ಬಡಿಯುವ ಕಾರ್ಯ ಮಾಡೋಣ ಎಂದರಲ್ಲದೆ ಸಾಹಿತ್ಯಿಕ ಕ್ಷೇತ್ರದ ದಿನಗಳಲ್ಲಿ ನನ್ನ ಅವರ ಒಡನಾಟವನ್ನು ಸಂಸ್ಮರಣೆಯಲ್ಲಿ ತಿಳಿಯ ಪಡಿಸಿದರು.



