ಕರಾವಳಿ

ಉಡುಪಿಯಲ್ಲಿ ಸೆ.4-5ಕ್ಕೆ ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಮಹೋತ್ಸವ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ & ಸೆ.5ರಂದು ರಥಬೀದಿಯಲ್ಲಿ ವಿಟ್ಲ ಪಿಂಡಿ(ಲೀಲೋತ್ಸವ) ನಡೆಯಲಿದೆ ಎಂದು ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಸೆ.4ರ ರಾತ್ರಿ 12.12ಕ್ಕೆ ಅರ್ತ್ಯ ಪ್ರದಾನ, 5ರಂದು ಬೆಳಗ್ಗೆ ಮಹಾಪೂಜೆ, ಅನ್ನಸಂತರ್ಪಣೆ&ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ. ರಾಜಾಂಗಣದಲ್ಲಿ ಹುಲಿವೇಷ, ಜಾನಪದ ನೃತ್ಯ ಸ್ಪರ್ಧೆ ಇದ್ದು ವಿಜೇತರಿಗೆ 1 ಲಕ್ಷರೂ.

ಬಹುಮಾನವಿದೆ. ಸೆ.6ರಂದು ಕೋಟಿ ತುಳಸಿ ಅರ್ಚನೆ, ಬಹುಮಾನ ವಿತರಣೆ ನಡೆಯಲಿದೆ.

Leave a Reply

Your email address will not be published. Required fields are marked *