
ಕೋಟ: ಇಲ್ಲಿನ ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
ಹೆಜಮಾಡಿ ಶ್ರೀ ಮಹೇಶ್ ಶಾಂತಿ ತಂಡ ಶ್ರೀಮಂದಿರದ ಗುರು ಪೀಠಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.ಸಂಘದ ವತಿಯಿಂದ ಮಹಾಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಮಂದಿರದ ಅರ್ಚಕರಾದ ಸಂತೋಷ್ ಪೂಜಾರಿ,ಮನೋಹರ್ ಪೂಜಾರಿ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಿದರು.
ಶ್ರೀ ಮಂದಿರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ,ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ
ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ,ಪ್ರದಾನಕಾರ್ಯದರ್ಶಿ ಪ್ರಸಾದ್ ಬಿಲ್ಲವರೊಂದಿಗೆ ಸಮಾಲೋಚಿಸಿ ಗುರುಪೂಜೆಯಲ್ಲಿ ಭಾಗಿಯಾದರು.
ಯುವ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ,ಮಹಿಳಾ ಘಟಕದ ವಸಂತಿ ಹಂದಟ್ಟು,ಹಿರಿಯರಾದ ಪುಟ್ಟಣ್ಣ ಪೂಜಾರಿ,ತಿಮ್ಮ ಪೂಜಾರಿ,ಸಿದ್ಧಿ ಶ್ರೀನಿವಾಸ್ ಪೂಜಾರಿ,ಕೃಷ್ಣ ಪೂಜಾರಿ.ಪಿ,ನರೇಂದ್ರ ಕುಮಾರ್ ಕೋಟ,ಸತೀಶ್ ವಡ್ಡರ್ಸೆ,ನಾಗೇಶ್ ಗೊಬ್ಬರಬೆಟ್ಟು,ಕಿರಣ್ ಪೂಜಾರಿ ತೆಕ್ಕಟ್ಟೆ,ರತ್ನಾಕರ ಬಾಳೆಬೆಟ್ಟು,ರತ್ನಾಕರ ಬಾರಿಕೆರೆ,ವಿಜಯ ಪೂಜಾರಿ,ಗುಲಾಬಿ ಪೂಜಾರಿ ಕಂಬಳಗದ್ದೆ,ಪಿಡಿಒ ಹರೀಶ್ ಕುಮಾರ್ ಶೆಟ್ಟಿ,ಮುಖಂಡರಾದ ಪ್ರಥ್ವಿರಾಜ್ ಶೆಟ್ಟಿ,ಸುರೇಶ್ ಶೆಟ್ಟಿ ಗೋಪಾಡಿ,ಶೇವಧಿ ಸುರೇಶ್ ಗಾಣಿಗ,ಚಂದ್ರ ಪೂಜಾರಿ,ಪಾಂಡು ಪೂಜಾರಿ,ನಾರಾಯಣ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾದರು.ಅಪರಾಹ್ನ ಶ್ರೀ ರಾಮಾಮೃತ ಭಜನಾ ತಂಡ ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.ಸಂಜೆ ವಿವಿಧ ಪೂಜೆ,ಭಜನಾ ಕಾರ್ಯಕ್ರಮಗಳು ಜರಗಿದವು




