webnews kannada

ಕೋಟದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತೋತ್ಸವ

ಕೋಟ: ಇಲ್ಲಿನ ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.ಹೆಜಮಾಡಿ ಶ್ರೀ ಮಹೇಶ್ ಶಾಂತಿ ತಂಡ ಶ್ರೀಮಂದಿರದ ಗುರು ಪೀಠಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.ಸಂಘದ ವತಿಯಿಂದ ಮಹಾಅನ್ನಸಂತರ್ಪಣೆ ಏರ್ಪಡಿಸಲಾಯಿತು.ಮಂದಿರದ ಅರ್ಚಕರಾದ ಸಂತೋಷ್ ಪೂಜಾರಿ,ಮನೋಹರ್ ಪೂಜಾರಿ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಿದರು.ಶ್ರೀ ಮಂದಿರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ,ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ,ಪ್ರದಾನಕಾರ್ಯದರ್ಶಿ […]

ಸಿನಿಮಾ

ನಟ ಚಿಕ್ಕಣ್ಣ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ಸ್ಯಾಂಡಲ್‌ವುಡ್‌ನ ಹಾಸ್ಯನಟ ಚಿಕ್ಕಣ್ಣ (Chikkanna Marriage) ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಆಗಸ್ಟ್ 29ರಂದು ಆರತಕ್ಷತೆ ಹಾಗೂ ಆಗಸ್ಟ್ 30ರಂದು ಧಾರಾ ಮುಹೂರ್ತ ನಡೆಯಲಿದ್ದು, ಇಂದಿನಿದ್ದ ಮದುವೆ ಶಾಸ್ತ್ರಗಳೂ ಆರಂಭವಾಗಿವೆ.ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಪಾವನಾ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಶಾಸ್ತ್ರದಲ್ಲಿ ಪಾವನಾ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಫ್ರೆಂಡ್ಸ್ ಕೂಡ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ.ಇತ್ತ ಚಿಕ್ಕಣ್ಣ ಅವರ ನಿವಾಸದಲ್ಲೂ ಅರಿಶಿಣ ಶಾಸ್ತ್ರ ನಡೆದಿದೆ. ವಧು-ವರರ […]

ಕರಾವಳಿ

ಎನ್‌ಡಿಆರ್‌ಎಫ್ ಕಮಾಂಡೋಗಳಿಂದ ಶೌರ್ಯ ಸದಸ್ಯರಿಗೆ ಒಂದು ದಿನದ ವಿಪತ್ತು ನಿರ್ವಹಣಾ ತರಬೇತಿ

ಬ್ರಹ್ಮಾವರ, ಆಗಸ್ಟ್ 26:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಬ್ರಹ್ಮಾವರ ತಾಲೂಕು ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಇವರ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಬ್ರಹ್ಮಾವರ ತಾಲೂಕಿನ ಸದಸ್ಯರಿಗೆ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಕಮಾಂಡೋಗಳ ಮೂಲಕ ಒಂದು ದಿನದ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಬಾರ್ಕೂರು ಪಟ್ಟಾಭಿರಾಮಚಂದ್ರ ಸಭಾಭವನದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಬ್ರಹ್ಮಾವರ ಆರಕ್ಷಕ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀಮತಿ ಮುಕ್ತಾ ಅವರು […]

ಕರಾವಳಿ

ಉಡುಪಿಯಲ್ಲಿ ಸೆ.4-5ಕ್ಕೆ ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಮಹೋತ್ಸವ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ & ಸೆ.5ರಂದು ರಥಬೀದಿಯಲ್ಲಿ ವಿಟ್ಲ ಪಿಂಡಿ(ಲೀಲೋತ್ಸವ) ನಡೆಯಲಿದೆ ಎಂದು ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಸೆ.4ರ ರಾತ್ರಿ 12.12ಕ್ಕೆ ಅರ್ತ್ಯ ಪ್ರದಾನ, 5ರಂದು ಬೆಳಗ್ಗೆ ಮಹಾಪೂಜೆ, ಅನ್ನಸಂತರ್ಪಣೆ&ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ. ರಾಜಾಂಗಣದಲ್ಲಿ ಹುಲಿವೇಷ, ಜಾನಪದ ನೃತ್ಯ ಸ್ಪರ್ಧೆ ಇದ್ದು ವಿಜೇತರಿಗೆ 1 ಲಕ್ಷರೂ. ಬಹುಮಾನವಿದೆ. ಸೆ.6ರಂದು ಕೋಟಿ ತುಳಸಿ ಅರ್ಚನೆ, ಬಹುಮಾನ ವಿತರಣೆ ನಡೆಯಲಿದೆ.

ಕ್ರೈಂ,

ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲಿ ರಾಜ್ಯಾತಿಥ್ಯ ಪ್ರಕರಣ; ಪೊಲೀಸ್ ಪೇದೆ ಸಸ್ಪೆಂಡ್

ಮಂಡ್ಯ: ಜೈಲಿನಲ್ಲಿ ಇರಬೇಕಾಗಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಅನಧಿಕೃತವಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಯಾವುದೇ ಖಾಯಿಲೆ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿದೆ. ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ. ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಹಾಗೂ ಸಾರ್ವಜನಿಕ […]

ಕರಾವಳಿ

ಆ.30ಕ್ಕೆ ಸಾಸ್ತಾನದಲ್ಲಿ ‘ಶ್ರೀ ನಾರಾಯಣಗುರು ಪರಿವರ್ತನಾ ಜಾಥಾ’ ಆಯೋಜನೆ

ಕೋಟ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯ ಪ್ರಯುಕ್ತ ‘ಶ್ರೀ ನಾರಾಯಣಗುರು ಪರಿವರ್ತನಾ ಜಾಥಾ’ ಕಾರ್ಯಕ್ರಮವನ್ನು ಆಗಸ್ಟ್ 30ರ ಭಾನುವಾರದಂದು ಆಯೋಜಿಸಿದೆಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಸಮರ್ಪಣಾ ಕೋಟ ಹಾಗೂ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಇವುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 8:30 ರಿಂದ ಸಾಸ್ತಾನ ಪೇಟೆ ಮಾರ್ಗವಾಗಿ ಪ್ರಾರಂಭಗೊಳ್ಳುವ ಈ ಜಾಥಾ ಕೋಡಿ ,ಪಾರಂಪಳ್ಳಿ ಪಡುಕೆರೆ , ಕೋಟ ,ಸಾಲಿಗ್ರಾಮ ಮಾರ್ಗವಾಗಿ ಸಾಗಿ, ಅಂತಿಮವಾಗಿ ಸಾಸ್ತಾನ […]

ದೇಶ

ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!

ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಹಾಕಿ ಸಾಮಾಜಿಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿ, 23 ವರ್ಷದ ಅಫ್ರಿದ್ ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ .ಬಂಧಿತ ಆರೋಪಿ ಅಫ್ರಿದ್ ಖಾಸಗಿ ಕಾರು ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದು, ಅದೇ ಖಾತೆಯ ಮೂಲಕ ವಿವಾದಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದ ಎಂದು […]

webnews kannada

ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ವಾರ್ಷಿಕ ಸಭೆದೇಶ ಸುಭಿಕ್ಷೆಯಾಗಿರಲು ಕೃಷಿ ಹೈನುಗಾರಿಕೆ ಪ್ರಮುಖ ಪಾತ್ರ- ಉಮೇಶ್ ಕುಂದರ್

ಕೋಟ: ದೇಶದ ಸುಭಿಕ್ಷೆಗೆ ಕೃಷಿ ಮತ್ತು ಹೈನುಗಾರಿಕೆ ಮೂಲಕ ಕಾರಣವಾಗಿದೆ ಎಂದು ಕೆ‌.ಎಂ.ಎಫ್ ವಿಸ್ತರ್ಣಾಧಿಕಾರಿ ಉಮೇಶ್ ಕುಂದರ್ ಹೇಳಿದರು.ಸೋಮವಾರ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಯುವ ಸಮೂಹ ಹೈನುಗಾರಿಕೆಯಲ್ಲಿ ಮುನ್ನುಗ್ಗುತ್ತಿರುವುದು ಆವಾಸಸ್ಥಾನ ಬೆಳವಣಿಗೆಯಾಗಿದೆ,ಹೈನುಗಾರಿಕೆ ಲಾಭದಾಯ ಉದ್ಯಮವಾಗಿರಿಸಿಕೊಂಡು ಕುಟುಂಬ ನಿರ್ವಹಣೆ ಸಾಧ್ಯ ಎಂದಯ ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ,ಹೈನುಗಾರಿಕೆ ವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹೆಚ್ಚು ಹೆಚ್ಚು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಲು ಸಲಹೆ ನೀಡಿದರ ಅವರು […]

ಕ್ರೈಂ,

ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ

ಬ್ರಹ್ಮಾವರ, ಅ.24: ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ ನಡೆದಿದೆ. ಶಾಯಿದ್ ಅಲಿ(25) ಎಂಬವನು ತನ್ನ ತಂದೆ ಮಹಮ್ಮದ್ ಅಲಿ ಹಾಗೂ ತಾಯಿ ಸಂಶದ್ ಬೇಗಂ ಎಂಬವರನ್ನು ಸುತ್ತಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತಂದೆ ಮಲ್ಪೆಯಲ್ಲಿ ಮೀನು ಸಾಗಾಟ ವಾಹನದ ಡ್ರೈವರ್ ಆಗಿದ್ದಾರೆ.ಶಾಯಿದ್ ಅಲಿ ಜುಮೆಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಆ ಕೆಲಸವನ್ನು ಸರಿಯಾಗಿ ಮಾಡದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಸ್ಥಳಿಯರು ನಿನ್ನೆ ರಾತ್ರಿ ಕೊಲೆ ನಡೆಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.ಸುತ್ತಿಗೆಯಲ್ಲಿ ಹೊಡೆದು ಕೊಂದಿದ್ದ […]