ಉಜಿರೆ, ಆ.22: ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ನಡೆಯುತ್ತಿರುವ ಅಸಿಸ್ಟೆಂಟ್ ಬುಕ್‌ಕೀಪರ್ ಹಾಗೂ ವಸ್ತ್ರಚಿತ್ರಕಲಾ–ಲಘು ಉದ್ಯಮಿ ತರಬೇತಿಯ ಶಿಬಿರಾರ್ಥಿಗಳು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು. ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಆಧುನಿಕ ಜಗತ್ತಿನಲ್ಲಿ ನಿರಂತರವಾಗಿ ಬದಲಾವಣೆಗಳು ನಡೆಯುತ್ತಿದ್ದು, ಅದರೊಂದಿಗೆ ನಾವು ಕೂಡ ಬದಲಾಗುತ್ತಾ ಬೆಳೆಯಬೇಕು. ಹೊಸ ತಂತ್ರಜ್ಞಾನ, ಹೊಸ ಆಲೋಚನೆ ಮತ್ತು ಹೊಸತನವನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ವ್ಯವಹಾರವನ್ನು ಪ್ರಾಮಾಣಿಕತೆ […]
Month: August 2026
ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ ಪ್ರದಾನ
ಕೋಟ: ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿವರ್ಷ ಕೊಡಮಾಡುವ ಅತ್ಯತ್ತಮ ಹಾಲು ಉತ್ಪಾದಕರ ಸಂಘ ಪ್ರಶಸ್ತಿಗೆ ಇಲ್ಲಿನ ಸಾಸ್ತಾನದ ಪಾಂಡೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆಯ್ಕೆಗೊಳಿಸಿ ಶನಿವಾರ ಪ್ರಶಸ್ತಿಯನ್ನು ಪ್ರದಾನಿಸಿತು.ಆ.22ರಂದು ಮಂಗಳೂರಿನ ದಕ್ಷಿಣಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ವೆಲೇರಿಯನ್ ಡಿಸೋಜ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ಇವರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಐಕಳದ ಬಾವ ಡಾ.ದೇವಿಪ್ರಸಾದ್ ಶೆಟ್ಟಿ ಪ್ರಶಸ್ತಿ […]
ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ
ಆ.22ಕ್ಕೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನಕೋಟ: ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿವರ್ಷ ಕೊಡಮಾಡುವ ಅತ್ಯತ್ತಮ ಹಾಲು ಉತ್ಪಾದಕರ ಸಂಘ ಪ್ರಶಸ್ತಿಗೆ ಇಲ್ಲಿನ ಸಾಸ್ತಾನದ ಪಾಂಡೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆಯ್ಕೆಗೊಳಿಸಿದೆ.ಆ.22ರಂದು ಮಂಗಳೂರಿನ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ.
ಗುಂಡಿಬೈಲು ರಸ್ತೆಯಲ್ಲಿ ಏಕಾಏಕಿ ಬಾಯ್ತೆರೆದ ಬೃಹತ್ ಕಂದಕ
ಉಡುಪಿ: ಉಡುಪಿ ಗುಂಡಿಬೈಲಿನ ಪೆಟ್ರೋಲ್ ಬಂಕ್ ಸಮೀಪ ಅಂಬಾಗಿಲು–ಕಲ್ಸಂಕ ಸಂಪರ್ಕ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಕಳಪೆ ಕಾಮಗಾರಿ ಆರೋಪ: ರಸ್ತೆ ನಿರ್ಮಾಣದಲ್ಲಿ ಮರಳು ಮಿಶ್ರಿತ ಕಳಪೆ ಗುಣಮಟ್ಟದ ವಸ್ತು ಬಳಸಿರುವುದರಿಂದ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆ ಮಧ್ಯೆ ಹೊಂಡಗಳು ನಿರ್ಮಾಣವಾಗಿದ್ದು, ಒಳಚರಂಡಿ ಕಾಮಗಾರಿಯಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ […]
ಯಾದಗಿರಿಯ ಕಂದಕೂರ ಬೆಟ್ಟದಲ್ಲಿ ಮೈನವಿರೇಳಿಸೋ ‘ಚೇಳಿನ ಜಾತ್ರೆ’
ಚೇಳಿನ ಹೆಸರು ಕೇಳಿದರೆನೇ ಸಾಕು ಮೈ ಜುಂ ಎನ್ನುತ್ತದೆ. ಒಂದು ವೇಳೆ ವಿಷಕಾರಿ ಚೇಳು ಕಚ್ಚಿತೋ ಮುಗಿಯಿತು ಕಥೆ. ನರ-ನಾಡಿಗಳಲ್ಲಿ ಪ್ರಾಣವೇ ಹಿಂಡುವಷ್ಟು ತೀವ್ರವಾದ ವಿಷ ಏರುತ್ತದೆ. ಅಂಥದ್ದರಲ್ಲಿ ಜೀವಂತ, ವಿಷಕಾರಿ ಚೇಳುಗಳನ್ನು ಕೈಯಲ್ಲಿ ಹಿಡಿದು ಮುದ್ದಾಡುತ್ತಾ, ಮೈ-ಮುಖದ ಮೇಲೆ ಹರಿದಾಡಿಸುತ್ತಾ ಸಂಭ್ರಮಿಸುವ ಅಪರೂಪದ ವಿಸ್ಮಯಕಾರಿ ಜಾತ್ರೆಯೊಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ನಡೆದಿದೆ. ಸಾಮಾನ್ಯವಾಗಿ ನಾಗರಪಂಚಮಿ ಹಬ್ಬದಂದು ಹಾವಿಗೆ ಹಾಲೆರೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬರುವ ದೃಶ್ಯ. ಆದರೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ […]
ಇಂದಿನ ರಾಶಿ ಭವಿಷ್ಯ (ಆಗಸ್ಟ್ 18, 2026)
ಮೇಷ (Aries) ವೃಷಭ (Taurus) ಮಿಥುನ (Gemini) ಕರ್ಕಾಟಕ (Cancer) ಸಿಂಹ (Leo) ಕನ್ಯಾ (Virgo) ತುಲಾ (Libra) ವೃಶ್ಚಿಕ (Scorpio) ಧನುಸ್ಸು (Sagittarius) ಮಕರ (Capricorn) ಕುಂಭ (Aquarius) ಮೀನ (Pisces)
ಶ್ರೀ ನಾಗ ಬ್ರಹ್ಮ ಕ್ಷೇತ್ರಪಾಲ ದೈವಸ್ಥಾನ ಭದ್ರಗಿರಿ ಬೈಕಾಡಿ: ನಾಗರಪಂಚಮಿ ಪರ್ವದಿನದ ಶ್ರದ್ಧಾ-ಭಕ್ತಿಯ ಸಂಭ್ರಮ
ಉಡುಪಿ ಜಿಲ್ಲೆಯ ಬೈಕಾಡಿ ಗ್ರಾಮದ ಪುಣ್ಯಭೂಮಿ ಭದ್ರಗಿರಿಯಲ್ಲಿ ನೆಲೆಸಿರುವ ಶ್ರೀ ನಾಗ ಬ್ರಹ್ಮ ಕ್ಷೇತ್ರಪಾಲ ದೈವಸ್ಥಾನದಲ್ಲಿ ನಾಗರಪಂಚಮಿಯ ಮಹಾಪರ್ವದಿನವನ್ನು ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ಶ್ರದ್ಧಾ-ಭಕ್ತಿಗಳಿಂದ ಆಚರಿಸಲು ಸರ್ವ ಸಿದ್ಧತೆಗಳು ನಡೆದಿವೆ. ಕರಾವಳಿಯ ಅತ್ಯಂತ ಕಾರಣಿಕ ಹಾಗೂ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಭದ್ರಗಿರಿಯಲ್ಲಿ ನಾಗರಪಂಚಮಿಯಂದು ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರಿಗೆ ತನು ಎರೆದು ಕೃಪೆಗೆ ಪಾತ್ರರಾದರು. ನಾಗರಪಂಚಮಿಯ ಧಾರ್ಮಿಕ ಪ್ರಾಮುಖ್ಯತೆ ಹಾಗೂ ಸೇವೆಗಳು ನಾಗಾರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಿನವೆಂದರೆ ಅದು ನಾಗರಪಂಚಮಿ. ಈ ದಿನದಂದು […]
ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಆಯೋಜನೆಯಲ್ಲಿ ಆಗಸ್ಟ್ ೧೬, ೨೦೨೬ ನೇ ಭಾನುವಾರ ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಸಂಜೆ ೩ ಗಂಟೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ಹೇಮಾದ್ರಿ ಗಿರಿಬಾಲೆ ಎಂಬ ಪ್ರಸಂಗವು ಪ್ರದರ್ಶನಗೊಂಡಿತು. ಗಂಧರ್ವರ ನಡುವೆ ಜನ್ಮಾಂತರಗಳಲ್ಲಿ ನಡೆಯುವ ದ್ವೇಷ, ಪ್ರೀತಿ, ಶಾಪ, ವರ, ಒಳ್ಳೆಯತನ ಹಾಗೂ ಧರ್ಮದ ವಿಜಯದ ಕುರಿತು ಧೃಶ್ಯಾವಳಿಗಳು ಮೂಡಿ ಬಂದವು. […]







