ಸಾಲಿಗ್ರಾಮ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಆಶ್ರಮವಾಸಿಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಬನ್ನಾಡಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಹಾಗೂ ದೇಶದ ಏಕತೆ, ಸಹಬಾಳ್ವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ. ಸಮಾಜದ ವಿವಿಧ ವರ್ಗಗಳೊಂದಿಗೆ ಹಬ್ಬ-ಹರಿದಿನಗಳನ್ನು ಆಚರಿಸುವ ಮೂಲಕ ಸಂತಸ ಹಂಚಿಕೊಳ್ಳುವುದು ರೋಟರಿಯ ಸಾಮಾಜಿಕ […]
Month: August 2026
ಮಮತಾ ಬ್ಯಾನರ್ಜಿ ಆಪ್ತ, ಮಾಜಿ ಡೆಪ್ಯೂಟಿ ಸ್ಪೀಕರ್ ಆಶಿಶ್ ಬ್ಯಾನರ್ಜಿ TMC ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ಮುಖಂಡ ಆಶಿಶ್ ಬ್ಯಾನರ್ಜಿ ಅವರು, ಭಾನುವಾರ (ಆ.16) ಬೆಳಿಗ್ಗೆ ಬೀರ್‌ಭೂಮ್ ಜಿಲ್ಲೆಯ ರಾಂಪುರಹತ್‌ನ ಹಟ್ಟಾಲಾ ಪಾರಾದಲ್ಲಿರುವ ಅವರ ಮನೆಯ ಸಮೀಪದ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ಕಚೇರಿಯಿಂದ ಡೆತ್ ನೋಟ್ (ಆತ್ಮಹತ್ಯೆ ಪತ್ರ) ಎಂದು ಶಂಕಿಸಲಾದ ಪತ್ರವೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಅವರ ಸಾವಿಗೆ ಕಾರಣವಾದ ಸಂದರ್ಭಗಳನ್ನು ಪತ್ತೆಹಚ್ಚಲು ಪೊಲೀಸರು ಅದರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ […]
ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ!
ಮಂಗಳೂರು, ಆಗಸ್ಟ್ 16: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುತ್ತಿರುವ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ತವರು ಜಿಲ್ಲೆ ಮಂಗಳೂರಲ್ಲಿಯೂ (Mangaluru) ಇದೇ ಮಾದರಿಯ ತಪಾಸಣೆ ನಡೆದಿದೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸ್ಟೋರೇಜ್ನಲ್ಲಿ ಹಳೇ ಮಾಂಸ, ಅವಧಿ ಮೀರಿದ ಎಣ್ಣೆ ಪತ್ತೆಯಾಗಿದೆ. ಗ್ರಾಹಕರೊಬ್ಬರು ಇಲ್ಲಿಂದ ಚಿಕನ್ ಫೆರಿ ಫೆರಿ ತರಿಸಿದ್ದರು. ಬಂದ ಫುಡ್ನಿಂದ ವಿಪರೀತ […]
16-08-2026 ಇಂದಿನ ರಾಶಿ ಭವಿಷ್ಯದ (ದ್ವಾದಶ ರಾಶಿಗಳ) ವಿವರವಾದ ದಿನ ಭವಿಷ್ಯ ಇಲ್ಲಿದೆ:
**ಮೇಷ ರಾಶಿ (Aries)** * **ದಿನದ ಸಾರಾಂಶ:** ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮೇಲಧಿಕಾರಿಗಳಿಂದ ಶ್ಲಾಘನೆ ದೊರೆಯಲಿದೆ. * **ಆರ್ಥಿಕತೆ & ಆರೋಗ್ಯ:** ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರಿಳಿತಗಳಿದ್ದರೂ ಒಟ್ಟಾರೆಯಾಗಿ ದಿನ ಉತ್ತಮವಾಗಿದೆ. * **ಸಲಹೆ:** ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ, ತಾಳ್ಮೆಯಿಂದ ಕೆಲಸ ಮಾಡಿ. — **ವೃಷಭ ರಾಶಿ (Taurus)** * **ದಿನದ ಸಾರಾಂಶ:** ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. […]
ಪಂಚವರ್ಣ ಸಂಘಟನೆ ಕಛೇರಿಯಲ್ಲಿ 80ನೇ ಹಸಿರು ಸ್ವಾತಂತ್ರ್ಯೋತ್ಸವ
ಕ್ರಾಂತಿಕಾರಿ,ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯ- ಸಂಸದ ಕೋಟ: ಕ್ರಾಂತಿಕಾರಿಗಳ ಹಾಗೂ ಅಹಿಂಸಾ ತತ್ವದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ ಇದಕ್ಕೆ ಕಾರ್ನಾಡ ಸದಾಶಿವ ರಾವ್ ಅವರ ಆ ಕಾಲಘಟ್ಟದ ಹೋರಾಟ ದಿನಗಳನ್ನು ನೆನೆಪಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರಸ್ತುತ ದೇಶ ಕಾಯುವ ಯೋಧರ ತ್ಯಾಗ ಬಲಿದಾನ ದೇಶವನ್ನು ಸುಭದ್ರತೆಗೊಳಿಸಿದೆ. ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ 80 ನೇ ಹಸಿರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು […]
ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಯುವಜನರು ಆರ್ಥಿಕ ಸ್ವಾತಂತ್ರ್ಯ ಸಾಧಿಸಿ ಮುನ್ನಡೆಯಬೇಕು : ಬಿ.ಪಿ. ವಿಜಯ ಕುಮಾರ್ ಉಜಿರೆ : ದೇಶದ ಸ್ವಾತಂತ್ರ್ಯದ ಜೊತೆಗೆ ಯುವಜನರು ಆರ್ಥಿಕ ಸ್ವಾತಂತ್ರ್ಯವನ್ನೂ ಸಾಧಿಸಿ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದು ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯ ಕುಮಾರ್* ಅವರು ಹೇಳಿದರು. ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಣ, ಕೌಶಲ್ಯ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ […]
ಪಾಕಿಸ್ತಾನ ಸೇನೆ ಮೇಲೆ ದಾಳಿ ಸಂಚು ಆರೋಪ: ಶಂಕಿತ ಉಗ್ರನ ಬಂಧನ
ವೆಬ್ ನ್ಯೂಸ್ ಓದುಗರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಪಾಕಿಸ್ತಾನ ಸೇನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 11ರಂದು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಶ್ಚಿಮ ಬಂಗಾಳ ಮೂಲದ 25 ವರ್ಷದ ಅಸಾಫುಲ್ ಮಲ್ಲಿಕ್ ಬಿನ್ ಅಬೀದ್ ಮಲ್ಲಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಿಗಣಿಯಲ್ಲಿ ವಾಸವಾಗಿದ್ದ ಆರೋಪಿಯು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಅಫ್ಘಾನಿಸ್ತಾನದ ಇಮ್ರಾನ್ […]
15-08-2026-ಇಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ ಅಗತ್ಯ?
ನಮ್ಮ ವೆಬ್ ನ್ಯೂಸ್ ಓದುಗರಿಗೆ ಎಲ್ಲರಿಗೂ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು “ರಾಶಿ ಫಲ: ಇಂದಿನ ನಿಮ್ಮ ಗ್ರಹಚಾರ ಹೇಗಿದೆ? ಯಾರಿಗೆ ಒಲಿಯಲಿದೆ ಲಕ್ಷ್ಮಿ ಕೃಪೆ? ನಿಮ್ಮ ದಿನ ಭವಿಷ್ಯ ಇಲ್ಲಿದೆ ನೋಡಿ!” ♈ ಮೇಷ ರಾಶಿ (Aries) ಇಂದು ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಧನ ಲಾಭದ ಯೋಗವಿದ್ದರೂ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ♉ ವೃಷಭ ರಾಶಿ (Taurus) ವ್ಯಾಪಾರ-ವಹಿವಾಟಿನಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ಆಸ್ತಿ […]
ಮೈಸೂರು: ಮದುವೆ ನಿಶ್ಚಯವಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣು
ನಮ್ಮ ಎಲ್ಲಾ ಓದುಗಾರರಿಗೂ 80ನೇ ವರ್ಷದ ಸ್ವತಂತ್ರೋತ್ಸವದ ಶುಭಾಶಯಗಳು ಮೈಸೂರು,ಆಗಸ್ಟ್,14,2026 webnewskannada: ಮದುವೆ ನಿಶ್ಚಯವಾಗಿದ್ದ ಕೇರಳ ಮೂಲದ ಜೋಡಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ(25) ಕಣ್ಣೂರು ಮೂಲದ ವಿ. ಅಮಲ್ (26) ಮೃತರು. ಅನುಶ್ರೀ ಹುಣಸೂರು ಪಟ್ಟಣದ ಎಸ್ ಬಿಐ ಉದ್ಯೋಗಿಯಾಗಿದ್ದರು. ಕೇರಳದ ವಿ.ಅಮುಲ್ ಜೊತೆ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್ 26 ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಅನುಶ್ರೀ, ಹುಣಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಇದೀಗ ಅನುಶ್ರೀ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿಅಮುಲ್ […]
ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್‌ಕೋಟಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು. 7 ಜನ ಕಾರ್ಮಿಕರು ಸಾವು
🚨 ನಮ್ಮೆಲ್ಲಾ ಓದುಗರರಿಗೂ 80ನೇ ವರ್ಷದ ಸ್ವತಂತ್ರೋತ್ಸವದ ಶುಭಾಶಯಗಳು ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್‌ಕೋಟಿ ಬಳಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು ಹಾಗೂ ಕಸ-ಬಂಡೆಗಳ ತ್ಯಾಜ್ಯ ನುಗ್ಗಿದ ಪರಿಣಾಮ 7 ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟೆಕ್ರಿ ಹೈಡೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸೇರಿದ ‘ವಿಷ್ಣುಗಡ-ಪೀಪಲ್‌ಕೋಟಿ’ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಅಗ್ರಸ್ಥಾನದ ಕಾಮಗಾರಿ ನಡೆಯುತ್ತಿದ್ದಾಗ, ಗುರುವಾರ ಸಂಜೆ ಭಾರಿ ಪ್ರಮಾಣದ ನೀರು ಮತ್ತು ಮಣ್ಣು-ಕಲ್ಲುಗಳ ಮಿಶ್ರಣ […]

