ರಾಜ್ಯ

ಕರ್ನಾಟಕ ಬಂದ್​​: ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಬಸ್​ಗಳಿಗೆ ತಾತ್ಕಾಲಿಕ ತಡೆ

ಕಾವೇರಿ ಜಲ ವಿವಾದ ಸಂಬಂಧ ಇಂದು (ಆಗಸ್ಟ್ 13) ಕರ್ನಾಟಕ ಬಂದ್ಗೆ ಕರೆ ನೀಡಿರುವ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಜನ ಜೀವನ, ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ನಗರದಿಂದ ತಮಿಳುನಾಡಿಗೆ ಸಂಚರಿಸುವ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ಪ್ರಮುಖ ನಗರಗಳಾದ ಊಟಿ, ತಿರುವಣ್ಣಾಮಲೈ, ತಲ್ಲಕುರ್ಚಿ, ಸೇಲಂ, ವೇಲೂರು, ಕಲ್ಪಕಂ,‌ ಕಾಂಜಿವರಂ, ವಂದಾವಾಸಿ, ತಿರುವಳ್ಳೂರು, ಉಳುಂದೂರು ಪೇಟೆ, ತಿರುಪ್ಪತ್ತೂರು, ಕಡಲೂರು, ತಿರುತ್ತಣಿ, ತಿಟ್ಟಕುಡಿ, ತಿರುಕ್ಕೋವಿಲೂರು, ಚಿದಂಬರಂ, ವಿರುತ್ತಾಚಲಂ ಸೇರಿ ಹಲವು ಊರುಗಳಿಗೆ ತೆರಳಬೇಕಿದ್ದ ಬಸ್ಗಖ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಉಳಿದಂತೆ ರಾಜ್ಯದ ವಿವಿಧೆಡೆ ಸಂಚರಿಸುವ ಬಸ್ಗಳ ಸಹಜ ಸ್ಥಿತಿಯಲ್ಲಿ ಆರಂಭವಾಗಿದ್ದು, ಮೈಸೂರು, ಟಿ.ನರಸೀಪುರ, ಹುಣಸೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಡಿಕೇರಿ, ಕುಶಾಲ ನಗರ, ಮಂಗಳೂರು ಸೇರಿ ಹಲವು ಕಡೆಗೆ KSRTC ಬಸ್ಗಳು ಸಂಚಾರ ಆರಂಭಿಸಿವೆ

ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *