
ಕೋಟ, ಸೆ.4: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಬಾರ್ಕೂರು ಮೂಡುಕೇರಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನವು ವೈವಿಧ್ಯಮಯ ಫಲ–ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ದೇವಸ್ಥಾನವನ್ನು ಸುಮಾರು 40ಕ್ಕೂ ಅಧಿಕ ವಿಧದ ಹಣ್ಣು, ತರಕಾರಿ ಹಾಗೂ ಹೂವುಗಳಿಂದಲೇ ವಿಶೇಷವಾಗಿ ಅಲಂಕರಿಸಲಾಗಿದೆ. ವೈವಿಧ್ಯಮಯ ಫಲ–ಪುಷ್ಪಾಲಂಕಾರವು ದೇಗುಲದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಭಕ್ತರು ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಶ್ರೀಕೃಷ್ಣನ ದರ್ಶನ ಪಡೆಯಲು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ವಿಶೇಷ ಅಲಂಕಾರ ಭಕ್ತರಲ್ಲಿ ಭಕ್ತಿ–ಸಂಭ್ರಮ ಮೂಡಿಸಿದೆ.
ಈ ಫಲ–ಪುಷ್ಪಾಲಂಕಾರ ಸೇವೆಯನ್ನು ದುಬೈ ಗಾಣಿಗ ಸಮಾಜದ ಅಧ್ಯಕ್ಷ ಅರುಣ್ ವಿ. ಗಾಣಿಗ ಅವರು ನೆರವೇರಿಸಿದ್ದಾರೆ.
