
ಕೋಟ:ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮೂಡಹಡು-ಪಾಂಡೇಶ್ವರ ಇದರ ಆಶ್ರಯದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14ರಿಂದ 16ರವರೆಗೆ ಮೂಡಹಡು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ
ಬೆಳಿಗ್ಗೆ 8:00ಕ್ಕೆ ವಿಗ್ರಹ ಪ್ರತಿಷ್ಠಾಪನೆ. 9:00ಕ್ಕೆ ಗಣಹೋಮ ಮತ್ತು ಮೂಡುಗಣಪತಿ ಸೇವೆ,ಬೆಳಿಗ್ಗೆ 10:30ಕ್ಕೆ ಮಕ್ಕಳಿಗೆ ಭಕ್ತಿಗೀತೆ ಮತ್ತು ಭಾವಗೀತೆ ಸ್ಪರ್ಧೆ ಮಧ್ಯಾಹ್ನ: 12:00ಕ್ಕೆ ಮಧ್ಯಾಹ್ನದ ಪೂಜೆ, 12:30ಕ್ಕೆ ಪ್ರಸಾದ ವಿತರಣೆ ಹಾಗೂ 1:00ಕ್ಕೆ ಮಹಾ ಅನ್ನಸಂತರ್ಪಣೆ.
ಸಂಜೆ 4:00ರಿಂದ ಶ್ರೀ ಬಾಲಾಜಿ ಮಹಿಳಾ ಭಜನಾ ಮಂಡಳಿ ಮೂಡಹಡು ಅವರಿಂದ ಭಜನಾ ಕಾರ್ಯಕ್ರಮ,ಸಂಜೆ 5:30ರಿಂದ ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ, 6:30ಕ್ಕೆ ರಂಗಪೂಜೆ, ಹಾಗೂ 7:00ರಿಂದ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ರಾತ್ರಿ 8:30ರಿಂದ ಶ್ರೀಶ ಆಚಾರ್ಯ ಸಾರಥ್ಯದಲ್ಲಿ ಈಶ ಲಾಸ್ಯ ನೃತ್ಯ ನಿಕೇತನ ಸಾಲಿಗ್ರಾಮ ಹಾಗೂ ಗಾಯಕರಿಂದ ಭಕ್ತಿ, ಗಾನ, ನೃತ್ಯ ವೈಭವ ಸಾಂಸ್ಕೃತಿಕ ರಸಮಂಜರಿ ಜರುಗಲಿದೆ.
ಸೆ. 15ರಂದು ಬೆಳಿಗ್ಗೆ 9:00ಕ್ಕೆ ಗಣಹೋಮ ಮತ್ತು ಮೂಡುಗಣಪತಿ ಸೇವೆ.
ಬೆಳಿಗ್ಗೆ 11:00ರಿಂದ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಅವರಿಂದ ಹಾಗೂ 12:00ರಿಂದ ಸಾಸ್ತಾನ ಮಹಿಳಾ ಮಂಡಳಿ ಅವರಿಂದ ಭಜನಾ ಸೇವೆ,ಮಧ್ಯಾಹ್ನ 12:00ಕ್ಕೆ ಮಧ್ಯಾಹ್ನದ ಪೂಜೆ, 12:30ಕ್ಕೆ ಪ್ರಸಾದ ವಿತರಣೆ ಮತ್ತು 1:00ಕ್ಕೆ ಮಹಾ ಅನ್ನಸಂತರ್ಪಣೆ,ಸಂಜೆ 5:00ರಿಂದ: ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ 6:00ರಿಂದ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ,ಸಂಜೆ 6:30ಕ್ಕೆ ರಂಗಪೂಜೆ,ಸಂಜೆ 7:00ಕ್ಕೆ ಅಭಿನವ ಕಲಾತಂಡ ಕುಂದಾಪುರ ಇವರಿಂದ ರತ್ನ ಶ್ಯಾಮಿಯಾನ ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ. 16ರಂದು ಬೆಳಿಗ್ಗೆ 8:00ಕ್ಕೆ ಗಣಹೋಮ ಹಾಗೂ ಮೂಡು ಗಣಪತಿ ಸೇವೆ,ಮಧ್ಯಾಹ್ನ 12:00ಕ್ಕೆ ಮಧ್ಯಾಹ್ನದ ಪೂಜೆ, 12:30ರಿಂದ ಭಜನೆ, 12:30ಕ್ಕೆ ಪ್ರಸಾದ ವಿತರಣೆ ಹಾಗೂ 1:00ಕ್ಕೆ ಮಹಾ ಅನ್ನಸಂತರ್ಪಣೆ,ಸಂಜೆ 4:00ಕ್ಕೆ ರಂಗಪೂಜೆ ಹಾಗೂ ಸಂಜೆ 5:00ಕ್ಕೆ ಶ್ರೀ ಮಹಾಗಣಪತಿಯ ಭವ್ಯ ಶೋಭಾಯಾತ್ರೆಯೊಂದಿಗೆ ಸೀತಾ ನದಿಯಲ್ಲಿ ಜಲಸ್ತಂಭನ (ವಿಸರ್ಜನೆ) ನೆರವೇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ
