webnews kannada

ರಾಜ್ಯಮಟ್ಟದ ಈಜುಕೂಟ: ಉಜಿರೆಯ ಕಿರಿಯ ಈಜುಪಟು ಬೆನಕಗೆ ಕಂಚಿನ ಪದಕ


ಹಾಸನದ ‘ಎಸ್‌ಕೆ ಸ್ವಿಮ್ಮಿಂಗ್ ಸೆಂಟರ್’ (ಮಿಲೇನಿಯಮ್ ವರ್ಲ್ಡ್ ಸ್ಕೂಲ್)ನಲ್ಲಿ ನಡೆದ ರಾಜ್ಯಮಟ್ಟದ ‘ನಾನ್-ಮೆಡಲಿಸ್ಟ್’ ಈಜು ಸ್ಪರ್ಧೆಯಲ್ಲಿ ಉಜಿರೆಯ ಕಿರಿಯ ಈಜುಪಟು ಬೆನಕ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಂಚಿನ ಪದಕಕ್ಕೆ (Bronze Medal) ಕೊರಳೊಡ್ಡಿದ್ದಾರೆ.

6.7 ವರ್ಷ ಪ್ರಾಯದ ಬಾಲಕ ಬೆನಕ, ‘ಬ್ರೆಸ್ಟ್ ಸ್ಟ್ರೋಕ್’ (Breast Stroke) ಈಜು ಸ್ಪರ್ಧೆಯನ್ನು ಕೇವಲ 25.50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮೂರನೇ ಸ್ಥಾನದೊಂದಿಗೆ ಸಾಧನೆ ಮೆರೆದಿದ್ದಾರೆ.

ಬೆನಕ ಅವರು ಅಶ್ವಿನಿ ಮತ್ತು ಪದ್ಮನಾಭ ದಂಪತಿಯ ಪುತ್ರ. ಪ್ರಸ್ತುತ ಉಜಿರೆಯ ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ (SDM Swimming Pool) ಈಜು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಸಾಧನೆಗೆ ಕಾರಣರಾದ ತರಬೇತುದಾರರಾದ Charan (HOD), Vikshitha ಮೇಡಂ ಹಾಗೂ Sheen ಸರ್ ಅವರಿಗೆ ಮತ್ತು ಸಾಧನೆ ಮಾಡಿದ ಕಿರಿಯ ಈಜುಪಟು ಬೆನಕಗೆ ಅಕಾಡೆಮಿ ಹಾಗೂ ಸಾರ್ವಜನಿಕರಿಂದ ಶ್ಲಾಘನೆಗಳು ವ್ಯಕ್ತವಾಗಿವೆ.

ಈ ಪ್ರಾಡಕ್ಟ್ ಅನ್ನು ನಿಮ್ಮದಾಗಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *