webnews kannada

ಉದ್ಯೋಗದ ಕನಸಿಗೆ ಬಲ ತುಂಬುವ ಉಚಿತ ಮಾರ್ಗದರ್ಶನ ಕಾರ್ಯಗಾರ ಬ್ರಹ್ಮಾವರದಲ್ಲಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಉತ್ತಮ ಅವಕಾಶವೊಂದು ದೊರೆಯುತ್ತಿದೆ. ಜನಸೇವಾ ಟ್ರಸ್ಟ್ ಗಿಳಿಯಾರು ಹಾಗೂ SMS ಡಿಗ್ರಿ ಕಾಲೇಜು, ಬ್ರಹ್ಮಾವರ ಇವರ ಸಹಯೋಗದಲ್ಲಿ “ಉಚಿತ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಗಾರ”ವನ್ನು ಜುಲೈ 26, 2026 (ಭಾನುವಾರ) ಬೆಳಿಗ್ಗೆ 9.30 ಗಂಟೆಗೆ SMS ಡಿಗ್ರಿ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

ಇಲ್ಲಿ ಕ್ಲಿಕ್ ಮಾಡಿ

ಇಂದಿನ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಕೇವಲ ವಿದ್ಯಾರ್ಹತೆ ಮಾತ್ರ ಸಾಕಾಗುವುದಿಲ್ಲ. ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಪರಿಣಾಮಕಾರಿ ರೆಸ್ಯೂಮ್ ಹಾಗೂ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವೂ ಅತ್ಯಗತ್ಯ. ಈ ಎಲ್ಲ ಅಂಶಗಳ ಕುರಿತು ತಜ್ಞರಿಂದ ಸಮಗ್ರ ತರಬೇತಿ ಮತ್ತು ಮಾರ್ಗದರ್ಶನ ಈ ಕಾರ್ಯಗಾರದಲ್ಲಿ ನೀಡಲಾಗುತ್ತದೆ.

ಕಾರ್ಯಗಾರದಲ್ಲಿ Interview Orientation & Training, ರೆಸ್ಯೂಮ್ ತಯಾರಿಸುವ ಸರಿಯಾದ ವಿಧಾನ, HR ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ಕೌಶಲ್ಯ, Group Discussion ಹಾಗೂ Communication Skills, ಮತ್ತು ವ್ಯಕ್ತಿತ್ವ ವಿಕಸನ ಕುರಿತ ಉಪಯುಕ್ತ ತರಬೇತಿಯನ್ನು ನೀಡಲಾಗುತ್ತದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಎಂ. ವಿವೇಕ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಆಳ್ವಾಸ್ ಪ್ರಗತಿ – 2026” ಬೃಹತ್ ಉದ್ಯೋಗ ಮೇಳ ಹಾಗೂ ಪ್ರಸ್ತುತ ಉದ್ಯೋಗಾವಕಾಶಗಳ ಕುರಿತು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ.

ಆಗಸ್ಟ್ 7 ಮತ್ತು 8, 2026ರಂದು ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಆಳ್ವಾಸ್ ಪ್ರಗತಿ – 2026 ಬೃಹತ್ ಉದ್ಯೋಗ ಮೇಳದಲ್ಲಿ 300ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. IT & ITES, Banking & Finance, Manufacturing, Sales & Retail, Electronics, Healthcare, Hospitality, Construction, Pharmaceuticals, Education ಹಾಗೂ NGO ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಈ ಕಾರ್ಯಗಾರದಲ್ಲಿ ಪಾಲ್ಗೊಳ್ಳುವವರಿಗೆ ಅದೇ ದಿನ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಉಚಿತ ನೋಂದಣಿ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ. ಜೊತೆಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ವಿಶೇಷ ಬಸ್ ವ್ಯವಸ್ಥೆಯನ್ನೂ ಆಯೋಜಕರು ಮಾಡಲಿದ್ದಾರೆ.

SSLC, PUC, ITI, ಡಿಪ್ಲೊಮಾ, ಯಾವುದೇ ಪದವೀಧರರು ಹಾಗೂ ಕುಂದಾಪುರ ಮತ್ತು ಬ್ರಹ್ಮಾವರ ತಾಲ್ಲೂಕಿನ ಉದ್ಯೋಗಾಕಾಂಕ್ಷಿಗಳು ಈ ಉಚಿತ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8310179856 ಸಂಖ್ಯೆಯನ್ನು ಸಂಪರ್ಕಿಸಬಹುದು.

“ಉದ್ಯೋಗ ಪಡೆಯುವ ಮೊದಲ ಹೆಜ್ಜೆ ಇಲ್ಲಿಂದ ಆರಂಭಿಸಿ” ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಕಾರ್ಯಗಾರವು ಉದ್ಯೋಗದ ಕನಸು ಹೊತ್ತಿರುವ ಯುವಜನರಿಗೆ ಹೊಸ ದಾರಿಯನ್ನು ತೋರಿಸುವ ಮಹತ್ವದ ವೇದಿಕೆಯಾಗಲಿದೆ.

Leave a Reply

Your email address will not be published. Required fields are marked *