
ಸ್ವಂತದ್ದೊಂದು ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವಮಾನದ ಕನಸು. ಆದರೆ ಇತ್ತೀಚಿನ ದಿನಗಳಲ್ಲಿ ಸಿಮೆಂಟ್, ಮರ. ಸ್ಟೀಲ್, ಮರಳು ಬೆಲೆ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರು ಮನೆ ಕಟ್ಟುವುದು ಹೇಗೆ ಎಂಬ ಆತಂಕ ಎದುರಾಗಿದೆ. ಆದರೆ ಪರಿಸರ ಪ್ರೇಮಿ ನಿತ್ಯಾನಂದ ನೇಜಾರ್ ರವರು ಕೇವಲ ಕಡಿಮೆ ವೆಚ್ಚದಲ್ಲಿ, ಅದೂ ಪ್ರಕೃತಿಗೆ ಯಾವುದೇ ಹಾನಿ ಮಾಡದಂತೆ ಅತ್ಯಂತ ಸುಂದರವಾದ “ಪರಿಸರ ಸ್ನೇಹಿ” ಮನೆಯನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಏನಿದು ಪರಿಸರ ಸ್ನೇಹಿ ಮನೆ? ಇದರ ವಿಶೇಷತೆ ಏನು? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್.

ಇದು ಒಂದು ಪರಿಸರ ಸ್ನೇಹಿ ಮನೆ. ಎಂದು ಹೇಳುವುದರಲ್ಲಿ ಎರಡು ಮಾತಿಲ್ಲ. ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ ಮನೆ. ಐದು ಸೆನ್ಸು ಜಾಗದಲ್ಲಿ ಸರಿಸುಮಾರು ಒಂದುವರೆ ಸೆನ್ಸ್ ಜಾಗ ಗಿಡಮರಗಳಿಗೆ ಬಿಟ್ಟು ಕಟ್ಟಿದಂತ ಮನೆ. ಇಷ್ಟು ದೊಡ್ಡ ಮನೆ ಕಟ್ಟಿ ಸಹ ಗಿಡಮರಗಳನ್ನು ಉಳಿಸಿ ಬೆಳೆಸಿದ ಹೆಗ್ಗಳಿಕೆ. ಪರಿಸರ ಪ್ರೇಮಿ ನಿತ್ಯಾನಂದ ನೇಜಾರ್ ಇವರಿಗೆ ಸಲ್ಲುತ್ತದೆ.

ಈ ಮನೆಯ ವಿಶೇಷತೆ 99.9 ಮರವನ್ನು ಹಾಕದೆ ಕಟ್ಟಲಾಗಿದೆ ಮನೆ. ಸಿಮೆಂಟು ಕಬ್ಬಿಣ ಯುಪಿಪಿಸಿ ಅಲ್ಯೂಮಿನಿಯಂ ಸ್ಟೀಲ್ ಇನ್ನಿತರ ವಸ್ತುಗಳನ್ನು ಹಾಕಿ ಕಟ್ಟಲಾದ ಮನೆ. ಆರೋಗ್ಯದ ದೃಷ್ಟಿಯನ್ನು ಕಾಪಾಡಲು ಓಪನ್ ಸ್ಕೈ ಮನೆ ಮಾಡಲಾಗಿದೆ. ಸರಾಗವಾಗಿ ಗಾಳಿ ಬೆಳಕು ಒಳಗೆ ಬಂದು ಹೆಚ್ಚಿನ ಉತ್ತಮವಾದ ಗಾಳಿಯನ್ನು ಪಡೆಯಲು ಇದು ಸಹಕಾರಿಯಾಗಿದೆಇಂದು ನಾವಿರುವ ಈ ಕಾಂಕ್ರೀಟ್ ಜಗತ್ತಿನಲ್ಲಿ ಬಿಸಿಲಿನ ಬೇಗೆಯಿಂದ ಬದುಕುವುದೇ ಕಷ್ಟವಾಗಿದೆ. ಆದರೆ ಈ ಮನೆಗೆ ಬಂದರೆ ಸಾಕು, ಯಾವುದೇ ಎಸಿ ಅಥವಾ ಫ್ಯಾನ್ ಇಲ್ಲದಿದ್ದರೂ ಪ್ರಕೃತಿಯ ತಂಪಾದ ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ. ಹೌದು, ಸಾಂಪ್ರದಾಯಿಕ ಮನೆಗಳಿಗಿಂತ ಶೇಕಡಾ 30 ರಿಂದ 40 ರಷ್ಟು ಕಡಿಮೆ ವೆಚ್ಚದಲ್ಲಿ ಈ ಸುಂದರವಾದ ಗೂಡನ್ನು ಕಟ್ಟಲಾಗಿದೆ.
ಕಡಿಮೆ ಬಜೆಟ್ನಲ್ಲಿ, ಪರಿಸರಕ್ಕೆ ಪೂರಕವಾಗಿ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಂತಿರುವ ಈ ಪರಿಸರ ಸ್ನೇಹಿ ಮನೆ ನಿಜಕ್ಕೂ ಹೆಮ್ಮೆ ತರುವಂತದ್ದು
ಪರಿಸರಕ್ಕೆ ಹಾನಿಯಾಗದೆ ಒಳ್ಳೆಯ ಆರೋಗ್ಯವನ್ನು ಕಾಪಾಡಲು ಇಂತಹ ಮನೆಯನ್ನು ನಿರ್ಮಿಸಿದ್ದೇನೆ. ಈ ಜಾಗದಲ್ಲಿ ನೀರಿನಿಂದ ಇಂಗುವಿಕೆಗೆ ಇಂಟರ್ಲಾಕ್ ಅಳವಡಿಕೆ ಮತ್ತು ಮಣ್ಣಿನ ಹೊದಿಕೆ. ಇದೇ ಪರಿಸರಸ್ನೇಹಿ ಮನೆ ಪ್ರಕೃತಿಯ ಕನಸು..
ಪರಿಸರ ಪ್ರೇಮಿ ನಿತ್ಯಾನಂದ ನೇಜಾರ್

ವರದಿ-ಪ್ರವೀಣ್ ಬ್ರಹ್ಮವರ




