
ಇನ್ನರ್ ವೀಲ್ ಕ್ಲಬ್ ಆಫ್ ಉಡುಪಿಯ 2026–27ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 1ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.ಮಾಜಿ ಅಧ್ಯಕ್ಷೆ ಶುಭಾ ಬಾಸ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಸರಿತಾ ವಿ. ಕೆ. ಅವರು ಅಧ್ಯಕ್ಷೆಯಾಗಿ, ಶಾಲಿನಿ ರಾಘವೇಂದ್ರ ಅವರು ಮಾಜಿ ಅಧ್ಯಕ್ಷೆಯಾಗಿ (IPP), ರಾಜಲಕ್ಷ್ಮಿ ಡಿ. ಶೆಟ್ಟಿ ಅವರು ಉಪಾಧ್ಯಕ್ಷೆಯಾಗಿ, ವಾಣಿ ಜೆ. ಪ್ರಭು ಅವರು ಕಾರ್ಯದರ್ಶಿಯಾಗಿ, ವೈಷ್ಣವಿ ಆಚಾರ್ಯ ಅವರು ಖಜಾಂಚಿಯಾಗಿ, ಮಾಲತಿ ಅಮೀನ್ ಅವರು ಸಂಪಾದಕಿಯಾಗಿ ಹಾಗೂ ಪ್ರೇಮಾ ಜಗದೀಶ್ ಅವರು ಅಂತರರಾಷ್ಟ್ರೀಯ ಸೇವಾ ಸಂಘಟಕಿಯಾಗಿ (ISO) ಅಧಿಕಾರ ಸ್ವೀಕರಿಸಿದರು.

2026–27ನೇ ಸಾಲಿನ ಕಾರ್ಯಕಾರಿ ಮಂಡಳಿಯ ಸದಸ್ಯೆಯರಾಗಿ ಗಿರಿಜಾ ರಾವ್, ನಿರ್ಮಲಾ ಪ್ರಭಾಕರ್, ರಶ್ಮಿ ಹೊಳ್ಳ, ಶುಭಾ ಬಾಸ್ರಿ, ಶ್ರೀಲಕ್ಷ್ಮಿ ಹಾಗೂ ಸ್ವಾತಿ ಪ್ರಭು ಆಯ್ಕೆಯಾಗಿದ್ದಾರೆ.
Amazon special offer ನೋಡಲು ಇಲ್ಲಿ ಕ್ಲಿಕ್ ಮಾಡಿ



