ಮುಂಬೈ: ಕಳೆದ ಶುಕ್ರವಾರ (ಜೂನ್ 26) ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ, ವಿಷಕಾರಿ ಮಾತ್ರೆಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಾತ್ರೆಗಳನ್ನು ಸೇವಿಸಿದ ಸುಮಾರು ಒಂದು ಡಜನ್ ಜನರು ಅಸ್ವಸ್ಥರಾದ ಬಳಿಕ, ಬೈಕುಲ್ಲಾ ಪ್ರದೇಶದಲ್ಲಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕ್ಯಾಪ್ಸುಲ್‌ಗಳಲ್ಲಿ ಇಲಿ ವಿಷ ಮತ್ತು ಇತರ ಮಾರಕ ರಾಸಾಯನಿಕಗಳನ್ನು ಸೇರಿಸಲಾಗಿದ್ದು, ಆರೋಪಿ ಫಯಾಜ್ ಸುಮಾರು 15 ಸಾವಿರ ಜನರನ್ನು ಕೊಲ್ಲಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
“ರೇ ರಸ್ತೆಯ ರೆಹಮತಾಬಾದ್ ಸ್ಮಶಾನದ ಬಳಿ ಅಶುರಾ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ, ಪ್ರೇಮ್‌ಜಿ ಈ ವಿಷಕಾರಿ ಮಾತ್ರೆಗಳನ್ನು ವಿತರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಜನಸಂದಣಿಯ ಲಾಭ ಪಡೆದು, ಅವುಗಳನ್ನು ನೋವು ನಿವಾರಕಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳೆಂದು ಹೇಳಿ ಮಾರಾಟ ಮಾಡುತ್ತಿದ್ದ. ಪೊಲೀಸರು ಸಕಾಲದಲ್ಲಿ ಆತನನ್ನು ಬಂಧಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ” ಎಂದು ಮುಂಬೈ ಪೊಲೀಸ್ ಡಿಸಿಪಿ (ಕೇಂದ್ರ ವಲಯ-I) ಜಯಂತ್ ಮೀನಾ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಮಾತ್ರೆಗಳನ್ನು ಸೇವಿಸಿದ ನಂತರ ಕನಿಷ್ಠ 11 ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅವರಲ್ಲಿ ಒಬ್ಬರಾದ ಸಲ್ಮಾನ್ ಸಯೀದ್, ಮಾತ್ರೆ ತೆಗೆದುಕೊಂಡ ನಂತರ ಹೊಟ್ಟೆ ನೋವು ಮತ್ತು ವಾಂತಿ ಉಂಟಾಗಿದೆ ಎಂದು ವರದಿ ಮಾಡಿದ್ದರು
ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಅವನ ಕ್ಯಾಪ್ಸುಲ್ ಸ್ಟಾಕ್ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು. ಇವುಗಳಲ್ಲಿ ಕನಿಷ್ಠ 14,900 ಮಾತ್ರೆಗಳು ಸೇರಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಆಗಲೇ ಗಣನೀಯ ಪ್ರಮಾಣದ ಮಾತ್ರೆಗಳನ್ನು ವಿತರಿಸಲಾಗಿತ್ತು.
ಆರೋಪಿ ಫಯಾಜ್ 30,000 ಖಾಲಿ ಕ್ಯಾಪ್ಸುಲ್‌ಗಳು ಮತ್ತು 50 ಕೆಜಿ ಫಾಸ್ಫರಸ್‌ಗೆ ಆರ್ಡರ್ ಮಾಡಿದ್ದ ಎಂದು ಡಿಸಿಪಿ ಮೀನಾ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮೂವರು ಮಹಿಳಾ ಸ್ವಯಂಸೇವಕರ ಜಾಗರೂಕತೆಯಿಂದ ಸಾವಿರಾರು ಜೀವಗಳನ್ನು ಉಳಿಸಲಾಗಿದೆ. ಓರ್ವ ಮಹಿಳಾ ಸ್ವಯಂಸೇವಕಿ ಆರೋಪಿಯು ಅನುಚಿತ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಮಾತ್ರೆಗಳನ್ನು ವಿತರಿಸುತ್ತಿರುವುದನ್ನು ಗಮನಿಸಿದರು. ಸ್ವಯಂಸೇವಕರು ತಕ್ಷಣ ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಮಾತ್ರೆ ಸೇವಿಸದಂತೆ ಜನರನ್ನು ಕೇಳುತ್ತಾ ಧ್ವನಿವರ್ಧಕವನ್ನು ಬಳಸಿ ಘೋಷಣೆ ಮಾಡಲಾಯಿತು.
ಬೆಂಗಳೂರು: ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಸೈಬರ್ ಸೆಂಟರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಸೈಯದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವತಿ ರಜೆ ಹಾಕಿದ್ದಕ್ಕೆ ಸೈಬರ್ ಸೆಂಟರ್ ಮಾಲೀಕ ಸೈಯದ್ ಸಾರ್ವಜನಿಕವಾಗಿ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಐದು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರೂ, ಕೆಲಸಕ್ಕೆ ರಜೆ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ […]
(www.webnewskannada.com): ಅನ್ನಭಾಗ್ಯ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ ಈ ಕುರಿತು ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ಅನ್ನಭಾಗ್ಯ ಯೋಜನೆ ಪರಿಷ್ಕರಣೆ ಮಾಡಬೇಕಾಗಿದೆ. ಸುಮಾರು 13 ಲಕ್ಷ ಅನರ್ಹರಿದ್ದಾರೆ ಅವರನ್ನ ತೆಗೆಯಬೇಕಿದೆ . ಬಡವರಿಗೆ ಅನ್ಯಭಾಗ್ಯ ನೀಡಬೇಕು. ಅನರ್ಹರು ಎಪಿಎಲ್ ಗೆ ಹೋಗಬೇಕು. ನಾನು ಈ ಹಿಂದೆಯೇ ಪ್ರಯತ್ನ ಮಾಡಿದ್ದೆ. ಆಗ ಗೊಂದಲ ಆಗಿತ್ತು. ಮನವಿ ಮಾಡುತ್ತಿದ್ದೇನೆ ಬಡವರಿಗೆ ಅವಕಾಶ ಮಾಡಿಕೊಡಿ ಎಂದರು. ಸಚಿವ ಸಂಫುಟ ಉಪಸಮಿತಿ ಸಭೆ ಏಕೆ ಕರದಿದ್ದಾರೆ […]
ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ವಿದ್ಯಾರ್ಥಿಗಳಿಗೆ, ಕಾಲೇಜಿನ “ಮಹಿಳಾ ವೇದಿಕೆ’ ವತಿಯಿಂದ “”ಮಹಿಳಾ ಸಬಲೀಕರಣ ಹಾಗೂ ಯೋಗ ಧ್ಯಾನದ ಮೂಲಕ ಮಾನಸಿಕ ಒತ್ತಡ ನಿರ್ವಹಣೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ “ಅರ್ಟ್ ಆಫ್ ಲಿವಿಂಗ್ ಟ್ರೈನರ್” ಶ್ರೀಮತಿ ಶೈಲಾಜ ಕೃಷ್ಣನಾನಂದ ಇವರು ವಹಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಯೋಗವು ದೇಹ – ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ, ನಿಯಮಿತ ಯೋಗಾಭ್ಯಾಸದಿಂದ ನರಮಂಡಲ […]