webnews kannada

ಭಜನಾ ಗುರು ಪ್ರಕಾಶ್ ಕುಲಾಲ್ ಕುಟುಂಬಕ್ಕೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತದಿಂದ ಒಂದು ಲಕ್ಷ ರೂ ಸಹಾಯಧನ

ಕೋಟ, ಎ.4: ಭಜನಾ ಕ್ಷೇತ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ ಉಡುಪಿ ಜಿಲ್ಲಾ ಭಜನಾ ಪರಿಷತ್ ಮಾಜಿ ಅಧ್ಯಕ್ಷ ಪ್ರಕಾಶ್ ಕುಲಾಲ್ ಇತ್ತೀಚೆಗೆ ನಿಧನರಾಗಿದ್ದು ಅವರ ಸಾಂತ್ವನ ನಿಧಿಗೆ ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತ ತಂಡ ಒಂದು ಲಕ್ಷ ರೂ ಸಹಾಯಧನ ಹಸ್ತಾಂತರಿಸಿತು.

ಮಾಜಿ ಶಾಸಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ ಸಹಾಯಧನ ಹಸ್ತಾಂತರಿಸಿ ಮಾತನಾಡಿ, ಯುವ ಜನಾಂಗ ಭಜನೆಯಲ್ಲಿ ತೊಡಗಿಸಿಕೊಳ್ಳುವುದು ತೀರ ಅಪರೂಪವಾಗಿರುವಾಗ ಚಿಕ್ಕ ವಯಸ್ಸಿನಲ್ಲಿ ಐವತ್ತಕ್ಕೂ ಹೆಚ್ಚು ತಂಡ ಕಟ್ಟಿ ಸಾವಿರಾರು ಮಂದಿಗೆ ಭಜನೆ ತರಬೇತಿ ನೀಡಿದ ಪ್ರಕಾಶ್ ಅವರ ಕಾರ್ಯ ಶ್ಲಾಘನೀಯ. ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸುವುದು ಅಗತ್ಯ ಹಾಗೂ
ಸಮಾಜಮುಖಿ ಕಾರ್ಯಗಳ ಮೂಲಕ ಕರಾವಳಿ ಕರ್ನಾಟಕದ ಅತೀ ದೊಡ್ಡ ಯುವಶಕ್ತಿಯಾಗಿ ಗುರುತಿಸಿಕೊಂಡಿರುವ ಟೀಂ ಅಭಿಮತ ಮತ್ತು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ನೀಡಲಾದ ದೊಡ್ಡ ಮೊತ್ತದ ಜತೆಗೆ, ವೈಯಕ್ತಿಕ ಸಹಕಾರವನ್ನು ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಮಂದಾರ್ತಿಯ ನಮಸ್ತೆ ಭಾರತ್ ಟ್ರಸ್ಟ್ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಹಾಯ ಅಭಿಯಾನದ ನಿಧಿಗೆ ಜನಸೇವಾ ಸಯಾಯಧನ‌ ನೀಡಲಾಯಿತು.

ನಮಸ್ತೆ ಭಾರತ್ ಟ್ರಸ್ಟ್‌ನ ಪ್ರಮೋದ್ ಮಂದಾರ್ತಿ,

ಗಿಳಿಯಾರು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಉದ್ಯಮಿ ರವಿಚಂದ್ರ ಶೇರುಗಾರ್, ಟೀಂ ಅಭಿಮತದ ಅರುಣ್ ಶೆಟ್ಟಿ ಗಿಳಿಯಾರ್, ಪ್ರವೀಣ್ ಯಕ್ಷೀಮಠ, ಶರತ್ ಕುಮಾರ್ ಶೆಟ್ಟಿ ಕೊತ್ತಾಡಿ, ದೇಲಟ್ಟು ಉಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಬೇಳೂರು, ನಿಖಿಲ್ ನಾಯಕ್ ತೆಕ್ಕಟ್ಟೆ, ಸುದೇಶ್ ಶೆಟ್ಟಿ ಬ್ರಹ್ಮಾವರ, ದರ್ಶನ್ ಶೆಟ್ಟಿ, ಕಾರ್ತೇಶ್ ಪುತ್ರನ್, ಜಗದೀಶ್ ಆಚಾರ್ಯ, ಮನೋಜ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *