ಬಾರ್ಕೂರಿನಲ್ಲಿ ಶ್ರವಣ ತಪಾಸಣೆ ಶಿಬಿರ

ಕೋಟ, ಜ.8: ನಮ್ಮೂರು ಬಾರ್ಕೂರು ಫೇಸ್ ಬುಕ್ ಫ್ರೆಂಡ್ಸ್ ಹಾಗೂ ಟೀಮ್ ಈಶ್ವರ್ ಮಲ್ಪೆ, ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಾಕ್ಟ್ ಬ್ರಹ್ಮಾವರ ಸಂಯುಕ್ತ ಆಶ್ರಯದಲ್ಲಿ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ
ರಾಮಮಂದಿರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಬಾರ್ಕುರಿನಲ್ಲಿ ನಡೆಯಿತು

ವೈದ್ಯರಾದ ಅಂಕಿತ ಕಲ್ಮಾಡಿ ಮಾತನಾಡಿ, ಕಿವಿಯ ಬಗ್ಗೆ ಕಾಳಜಿ ಅತೀ ಅಗತ್ಯ. ಕಿವುಡರಾಗಿ ಜೀವನ ನಡೆಸುವುದು ತುಂಬಾ ಕಷ್ಟ ಎಂದರು.

ನಮ್ಮೂರು ಬಾರ್ಕೂರು ಫೇಸ್ ಬುಕ್ ಫ್ರೆಂಡ್ಸ್ ಅಡ್ಮಿನ್ ಗಣೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ,
ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷೆ ಕಿಶೋರಿ ಶೆಟ್ಟಿ , ಬಾರ್ಕೂರು ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಆಶಿಸ್ ಅಂದ್ರಾದೆ ಇದ್ದರು.

ಲವ ಬಂಗೇರ ಸ್ವಾಗತಿಸಿ, ಅಲ್ವಿನ್ ಅಂದ್ರಾಡೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಸುದರ್ಶನ ಉಡುಪ ವಂದಿಸಿದರು.

Leave a Reply

Your email address will not be published. Required fields are marked *