ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ & ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣದ ಆರೋಪಿಗಳಾದ ಪ್ರಶಾಂತ್ ತಲ್ವಾರ್, ಚಂದ್ರಶೇಖರ್ & ನಿಂಗರಾಜ್ ಗುಲಾಪ್ಪ ತಲ್ವಾರ್ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮೊದಲು ಸೆಷನ್ಸ್ ಕೋರ್ಟ್ ಕೂಡ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು
Month: July 2026
ಶಾಶ್ವತ ವಿದ್ಯುತ್ ಸಂಪರ್ಕ.. ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವವರಿಗೆ OC ಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಪ್ರಕರಣಗಳಿಗೆ & ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಂಡವರಿಗೆ ಮಾತ್ರ ಅನ್ವಯಿಸುವಂತೆ ಒಸಿ ಪ್ರಮಾಣಪತ್ರ ಪಡೆಯುವುದರಿಂದ, ವಿನಾಯಿತಿ ನೀಡಿ ಇಂಧನ ಇಲಾಖೆ ಆದೇಶಿಸಿದೆ. 15 ದಿನದೊಳಗೆ ಅರ್ಹರು ಅರ್ಜಿ ಸಲ್ಲಿಸಬಹುದು.
ಅನ್ನಭಾಗ್ಯ ಪರಿಷ್ಕರಣೆ: 13 ರಿಂದ 14 ಲಕ್ಷ ಅನರ್ಹರನ್ನು ತೆಗೆಯಬೇಕಿದೆ- ಸಚಿವ ಕೆ.ಎಚ್ ಮುನಿಯಪ್ಪ
(www.webnewskannada.com): ಅನ್ನಭಾಗ್ಯ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ ಈ ಕುರಿತು ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ಅನ್ನಭಾಗ್ಯ ಯೋಜನೆ ಪರಿಷ್ಕರಣೆ ಮಾಡಬೇಕಾಗಿದೆ. ಸುಮಾರು 13 ಲಕ್ಷ ಅನರ್ಹರಿದ್ದಾರೆ ಅವರನ್ನ ತೆಗೆಯಬೇಕಿದೆ . ಬಡವರಿಗೆ ಅನ್ಯಭಾಗ್ಯ ನೀಡಬೇಕು. ಅನರ್ಹರು ಎಪಿಎಲ್ ಗೆ ಹೋಗಬೇಕು. ನಾನು ಈ ಹಿಂದೆಯೇ ಪ್ರಯತ್ನ ಮಾಡಿದ್ದೆ. ಆಗ ಗೊಂದಲ ಆಗಿತ್ತು. ಮನವಿ ಮಾಡುತ್ತಿದ್ದೇನೆ ಬಡವರಿಗೆ ಅವಕಾಶ ಮಾಡಿಕೊಡಿ ಎಂದರು. ಸಚಿವ ಸಂಫುಟ ಉಪಸಮಿತಿ ಸಭೆ ಏಕೆ ಕರದಿದ್ದಾರೆ […]
ರಾಜ್ಯದಲ್ಲಿ ಭಾರೀ ಮಳೆ: ಯೆಲ್ಲೊ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಮಳೆಯ ಅಬ್ಬರ ಶುರುವಾಗಿದೆ. ಸೋಮವಾರದಿಂದ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಭಾರೀ ಮಳೆಯ ಸೂಚನೆ ಹಿನ್ನಲೆಯಲ್ಲಿ ಇಂದು 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ. ಜೂನ್ ತಿಂಗಳ ನಾಲ್ಕನೇ ವಾರಕ್ಕೆ ಪ್ರವೇಶಿಸುತ್ತಿದ್ದರೂ ಈ ಬಾರಿ ಮುಂಗಾರು ಮಳೆ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬಹುತೇಕ ಕಡಿಮೆಯಾಗಿದೆ. ಕಳೆದ ವರ್ಷದಂತೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿಟ್ಟೂ ಬಿಟ್ಟೂ ಮಳೆ ಬರುತ್ತಿದೆ. ಆದರೆ ಕಳೆದೊಂದು […]
ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ..
ಅಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 79 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದರು. 386 ಇನ್ನಿಂಗ್ಸ್‌ಗಳಲ್ಲಿ 16,137 ರನ್ ಗಳಿಸುವ ಮೂಲಕ ಅವರು ವೀರೇಂದ್ರ ಸೆಹ್ವಾಗ್ ಅವರ ದಾಖಲೆ (16,119 ರನ್) ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಆಟಗಾರರಾದರು. ಜೊತೆಗೆ ಭಾರತದ ಪರ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏಕದಿನ ಕ್ರಿಕೆಟ್‌ನಲ್ಲಿ 1,100 ಬೌಂಡರಿ ಬಾರಿಸಿ ಅಪರೂಪದ ಮೈಲಿಗಲ್ಲನ್ನು ತಲುಪಿದರು
ರುಡ್‌ಸೆಟ್ ಉಜಿರೆಯಲ್ಲಿ FLC-CRP ತರಬೇತಿ ಸಮಾರೋಪ
ಉಜಿರೆ : ಗ್ರಾಮೀಣ ಸಮುದಾಯಗಳಿಗೆ ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳು (FLC-CRP) ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಎನ್‌ಆರ್‌ಎಲ್‌ಎಂ (NRLM) ವಿಭಾಗದ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ *ಶ್ರೀ ಹರಿಪ್ರಸಾದ್* ಅವರು ಹೇಳಿದರು. ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ಆಯೋಜಿಸಲಾದ ಹಣಕಾಸು ಸಾಕ್ಷರತಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (FLC-CRP) ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತರಬೇತಿ […]
ಪಾಕ್ ಮೇಲೆ ಅಫ್ಘಾನ್ ಡೋನ್ ದಾಳಿ
ಪಾಕ್ ಮೇಲೆ ಅಫ್ಘಾನಿಸ್ತಾನ್ ದಾಳಿ ನಡೆಸಿದೆ. ಖೈಬರ್ ಪಸ್ತುಂಖ್ಯಾ, ಬಲೂಚಿಸ್ತಾನದಲ್ಲಿನ ISIS ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಡೋನ್ ದಾಳಿ ನಡೆಸಿದ್ದಾಗಿ ತಾಲಿಬಾನ್ ಘೋಷಿಸಿದೆ. ಗುಲಿಸ್ತಾನ್, ಶಾಂಕರ್ ಅಬ್, ಖಾಂಬರ್ ಖೇಲ್ ಪ್ರದೇಶಗಳಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸಗೊಳಿಸಲಾಗಿದ್ದು, ಆ ಸ್ಥಳಗಳಿಂದ ನಮ್ಮ ಮೇಲೆ ದಾಳಿಗೆ ಸಂಚು ರೂಪಿಸಲಾಗುತ್ತಿತ್ತು ಎಂದು ತಾಲಿಬಾನ್ ಹೇಳಿದೆ. ಇತ್ತೀಚೆಗೆ ಪಾಕ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.






