
ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಪ್ರಥಮ ವರುಷದ ವಿದ್ಯಾರ್ಥಿಗಳಿಗೆ “ಓರಿಯೆಂಟೇಷನ್ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯರವರು ವಹಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಇಂದು ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ ಇಲ್ಲಿ ನೀವು ಕೇವಲ ಪಠ್ಯ ಜ್ಞಾನವನ್ನಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ, ಶಿಸ್ತು, ನಾಯಕತ್ವ, ಹಾಗೂ ಜೀವನ ಮೌಲ್ಯಗಳನ್ನು ನಮ್ಮ ಸಂಸ್ಥೆ ಯಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ಕಲಿಯಲಿದ್ದೀರಿ ಎ0ದರು. ವಿದ್ಯಾರ್ಥಿ ಜೀವನವು ಕನಸುಗಳನ್ನು ಸಾಕರಗೊಳಿಸುವ ಅತ್ಯುತ್ತಮ ಸಮಯವಾಗಿದೆ, ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ, ಅಧ್ಯಾಪಕರಿಂದ ಮಾರ್ಗದರ್ಶನ ಪಡೆಯಿರಿ ಎ0ದರು. ಪ್ರಾoಶುಪಾಲರು ಕಾಲೇಜಿನ ಅಧ್ಯಾಪಕರ ಪರಿಚಯ ಹಾಗೂ ನಿಯಮಗಳು, ಶಿಸ್ತು, ಶೈಕ್ಷಣಿಕ ವ್ಯವಸ್ಥೆಯ ಮಾಹಿತಿ, ಗ್ರಂಥಾಲಯ, ಪ್ರಯೋಗಲಯ, ಪರೀಕ್ಷಾವಿಧಾನ, ಪಠ್ಯಕ್ರಮ, ಮತ್ತು ಚಟುವಟಿಕೆಗಳ ವಿವರಣೆ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ಮಮತಾ, ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ರಾಝಿಕ ಉಪಸ್ಥಿತರಿದ್ದರು.

ಈ ಪ್ರಾಡಕ್ಟ್ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ




