ಮೈಶುಗ‌ರ್ ಕಾರ್ಖಾನೆಯಲ್ಲಿ ಅವಘಡ: ಬಾಟ್ಲರ್‌ಗೆ ಬಿದ್ದು ಕಾರ್ಮಿಕ ಸಾವು

ಮೈಶುಗ‌ರ್ ಕಾರ್ಖಾನೆಯ ಬಾಟ್ಲರ್‌ಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಚರಣ್ ಕುಮಾರ್ (33) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕೆ.ಶೆಟ್ಟಿಹಳ್ಳಿಯ ನಿವಾಸಿಯಾಗಿದ್ದ ಚರಣ್, ಶ್ರೇಯ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 3ರಂದು ಬಾಯರ್‌ಗೆ ಬಿದ್ದ ಅವರನ್ನು ಮೈಸೂರಿನ ಕೆ.ಆ‌ರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಡಳಿತ ಮಂಡಳಿ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *