webnews kannada

ಗುಂಡಿಬೈಲು  ರಸ್ತೆಯಲ್ಲಿ ಏಕಾಏಕಿ ಬಾಯ್ತೆರೆದ ಬೃಹತ್ ಕಂದಕ

ಉಡುಪಿ: ಉಡುಪಿ ಗುಂಡಿಬೈಲಿನ ಪೆಟ್ರೋಲ್ ಬಂಕ್‌ ಸಮೀಪ ಅಂಬಾಗಿಲು–ಕಲ್ಸಂಕ ಸಂಪರ್ಕ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಳಪೆ ಕಾಮಗಾರಿ ಆರೋಪ: ರಸ್ತೆ ನಿರ್ಮಾಣದಲ್ಲಿ ಮರಳು ಮಿಶ್ರಿತ ಕಳಪೆ ಗುಣಮಟ್ಟದ ವಸ್ತು ಬಳಸಿರುವುದರಿಂದ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆ ಮಧ್ಯೆ ಹೊಂಡಗಳು ನಿರ್ಮಾಣವಾಗಿದ್ದು, ಒಳಚರಂಡಿ ಕಾಮಗಾರಿಯಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ತೀವ್ರ ಭೀತಿ ಹುಟ್ಟಿಸಿದೆ

Leave a Reply

Your email address will not be published. Required fields are marked *