
ಉಡುಪಿ ಜಿಲ್ಲೆಯ ಬೈಕಾಡಿ ಗ್ರಾಮದ ಪುಣ್ಯಭೂಮಿ ಭದ್ರಗಿರಿಯಲ್ಲಿ ನೆಲೆಸಿರುವ ಶ್ರೀ ನಾಗ ಬ್ರಹ್ಮ ಕ್ಷೇತ್ರಪಾಲ ದೈವಸ್ಥಾನದಲ್ಲಿ ನಾಗರಪಂಚಮಿಯ ಮಹಾಪರ್ವದಿನವನ್ನು ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ಶ್ರದ್ಧಾ-ಭಕ್ತಿಗಳಿಂದ ಆಚರಿಸಲು ಸರ್ವ ಸಿದ್ಧತೆಗಳು ನಡೆದಿವೆ. ಕರಾವಳಿಯ ಅತ್ಯಂತ ಕಾರಣಿಕ ಹಾಗೂ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಭದ್ರಗಿರಿಯಲ್ಲಿ ನಾಗರಪಂಚಮಿಯಂದು ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರಿಗೆ ತನು ಎರೆದು ಕೃಪೆಗೆ ಪಾತ್ರರಾದರು.
ನಾಗರಪಂಚಮಿಯ ಧಾರ್ಮಿಕ ಪ್ರಾಮುಖ್ಯತೆ ಹಾಗೂ ಸೇವೆಗಳು
ನಾಗಾರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಿನವೆಂದರೆ ಅದು ನಾಗರಪಂಚಮಿ. ಈ ದಿನದಂದು ಭದ್ರಗಿರಿಯ ಶ್ರೀ ನಾಗ ಬ್ರಹ್ಮ ಸನ್ನಿಧಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು
- ಮಹಾ ತನು ಎರೆಯುವ ಸೇವೆ: ಭಕ್ತಾದಿಗಳು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ನಾಗದೇವರ ಬಿಂಬಕ್ಕೆ ಹಾಲು, ಎಳೆನೀರು, ಅರಿಶಿನ ಹಾಗೂ ಪಂಚಾಮೃತದಿಂದ ಮಹಾ ತನು ಎರೆದು ಭಕ್ತಿ ಸಮರ್ಪಿಸಿದರು .
- ಮಹಾ ಪೂಜೆ ಮತ್ತು ಪ್ರಸಾದ ವಿತರಣೆ: ಮಧ್ಯಾಹ್ನ ಶ್ರೀ ನಾಗ ಬ್ರಹ್ಮ ಹಾಗೂ ಕ್ಷೇತ್ರಪಾಲ ದೈವಕ್ಕೆ ಮಹಾಪೂಜೆ ನಡೆದು, ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಗಂಧ-ಪ್ರಸಾದ ವಿತರಿಸಲಾಗುವುದು.
- ಭದ್ರಗಿರಿಯ ಶ್ರೀ ನಾಗ ಬ್ರಹ್ಮ ಮತ್ತು ರಕ್ಷಕ ದೈವವಾದ ಕ್ಷೇತ್ರಪಾಲ ದೈವಗಳು ನಂಬಿ ಬಂದ ಭಕ್ತರನ್ನು ಎಂದಿಗೂ ಕೈಬಿಡದ ಕಾರಣಿಕ ಶಕ್ತಿಗಳಾಗಿವೆ. ಸಂತಾನ ಭಾಗ್ಯ, ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ ಹಾಗೂ ಮನೆಯಲ್ಲಿ ನೆಮ್ಮದಿಗಾಗಿ ಭಕ್ತರು ನಾಗರಪಂಚಮಿಯ ಈ ಶುಭದಿನದಂದು ವಿಶೇಷ ಹರಿಕೆಗಳನ್ನು ಸಲ್ಲಿಸಿ ದೈವಿಕ ಅನುಗ್ರಹ ಪಡೆಯುತ್ತಾರೆ.


