🚨 ನಮ್ಮೆಲ್ಲಾ ಓದುಗರರಿಗೂ 80ನೇ ವರ್ಷದ ಸ್ವತಂತ್ರೋತ್ಸವದ ಶುಭಾಶಯಗಳು

ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್ಕೋಟಿ ಬಳಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು ಹಾಗೂ ಕಸ-ಬಂಡೆಗಳ ತ್ಯಾಜ್ಯ ನುಗ್ಗಿದ ಪರಿಣಾಮ 7 ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟೆಕ್ರಿ ಹೈಡೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ಗೆ ಸೇರಿದ ‘ವಿಷ್ಣುಗಡ-ಪೀಪಲ್ಕೋಟಿ’ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಅಗ್ರಸ್ಥಾನದ ಕಾಮಗಾರಿ ನಡೆಯುತ್ತಿದ್ದಾಗ, ಗುರುವಾರ ಸಂಜೆ ಭಾರಿ ಪ್ರಮಾಣದ ನೀರು ಮತ್ತು ಮಣ್ಣು-ಕಲ್ಲುಗಳ ಮಿಶ್ರಣ ಒಳನುಗ್ಗಿದೆ. ಘಟನೆ ಸಂಭವಿಸಿದಾಗ ಸ್ಥಳದಲ್ಲಿ ಒಟ್ಟು 22 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ನೀರಿನ ರಭಸಕ್ಕೆ ಹಲವರು ಸುರಂಗದ ಹೊರಭಾಗಕ್ಕೆ ತಳ್ಳಲ್ಪಟ್ಟಿದ್ದರೆ, ಹಲವರು ಒಳಭಾಗದಲ್ಲೇ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಜನರನ್ನು ಹೊರತೆಗೆದಿದ್ದಾರೆ. 14 ಗಾಯಾಳುಗಳನ್ನು ಗೋಪೇಶ್ವರ ಮತ್ತು ಪೀಪಲ್ಕೋಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.7 ಕಾರ್ಮಿಕರು ಮೃತಪಟ್ಟಿದ್ದಾರೆ.





