webnews kannada

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ಬೆಂಗಳೂರು, ಆಗಸ್ಟ್​ 05: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ನಂಬಿಕೆ ಗಳಿಸಿ ನಕಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ, ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಆಗಸ್ಟ್ 3ರಂದು ದಾಖಲಾಗಿರುವ ಎಫ್‌ಐಆರ್ ಪ್ರಕಾರ ಈ ವಂಚನೆ 2025ರ ಅಕ್ಟೋಬರ್ 27ರಂದು ಆರಂಭವಾಗಿದ್ದು, ನಿಹಾರಿಕಾ ಚೌಧರಿ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಮಹಿಳೆ ಹಣ ಪೀಕಿರುವುದಾಗಿ ಆರೋಪಿಸಲಾಗಿದೆ. ಆಕೆ ತಾನು ಮೂಲತಃ ಆಂಧ್ರಪ್ರದೇಶದ ವಿಜಯವಾಡದವಳಾಗಿದ್ದು, ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸವಿದ್ದೇನೆ. ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ನಂತರ ಹಲವು ವಾಟ್ಸಾಪ್ ಸಂಖ್ಯೆಗಳ ಮೂಲಕ ಸಂಪರ್ಕ ಮುಂದುವರಿಸಿ, ದೂರುದಾರರ ವಿಶ್ವಾಸ ಗಳಿಸಿದ ಬಳಿಕ mivonexchg.com ಹಾಗೂ binzoex.com ಎಂಬ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಳು.

ತಕ್ಷಣ ಆಫರ್ ಬೆಲೆಯಲ್ಲಿ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ:

ಆಕೆಯ ಸೂಚನೆಯಂತೆ ದೂರುದಾರರು ವಿವಿಧ ಕ್ರಿಪ್ಟೋ ವಿನಿಮಯ ವೇದಿಕೆಗಳ ಮೂಲಕ USDT (ಟೆಥರ್) ಖರೀದಿಸಿ, ಅದನ್ನು ತಮ್ಮ ಟ್ರಸ್ಟ್​​ ವಾಲೆಟ್​​ಗೆ ವರ್ಗಾಯಿಸಿದ್ದರು. ಬಳಿಕ ಸುಮಾರು 30,000 USDT ಅನ್ನು ಆಕೆ ನೀಡಿದ ವಿವಿಧ ಕ್ರಿಪ್ಟೋ ವಾಲೆಟ್ ವಿಳಾಸಗಳಿಗೆ ವರ್ಗಾಯಿಸಿದ್ದರು. ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ, ತೆರಿಗೆ ಹಾಗೂ ಇತರ ಶುಲ್ಕಗಳನ್ನು ಪಾವತಿಸಬೇಕೆಂದು ವೆಬ್‌ಸೈಟ್ ತಿಳಿಸಿತು. ಸೂಚನೆಯಂತೆ ಹೆಚ್ಚುವರಿ ಹಣ ಪಾವತಿಸಿದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿ ದೂರು ದಾಖಲಿಸಿದ್ದಾರೆ

ಪೊಲೀಸರ ಪ್ರಕಾರ, ಆರೋಪಿಗಳು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಗುರುತು ಸೃಷ್ಟಿಸಿ, ದೂರುದಾರರನ್ನು ಸಂಪರ್ಕಿಸಿ ನಕಲಿ ಕ್ರಿಪ್ಟೋ ಹೂಡಿಕೆ ವೇದಿಕೆಗಳಲ್ಲಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ವರ್ಗಾಯಿಸಿದ ಹಣವನ್ನು ವಿವಿಧ ಕ್ರಿಪ್ಟೋ ವಾಲೆಟ್‌ಗಳಿಗೆ ವರ್ಗಾಯಿಸಿ ದೂರುದಾರರಿಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ. ಅಲ್ಲದೆ ಈ ವೆಬ್‌ಸೈಟ್‌ಗಳು ನಕಲಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಎಂದು ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

Leave a Reply

Your email address will not be published. Required fields are marked *