ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ವಸ್ತ್ರ ಚಿತ್ರ ಕಲಾ ಲಘು ಉದ್ಯಮಿ (ಎಂಬ್ರಾಯ್ಡರಿ)ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಯಾನಂದ ಕೋಟ್ಯಾನ್, ಕರ್ನಾಟಕ ರಾಜ್ಯ ಟೈಲರಿಂಗ್ ಅಸೋಸಿಯೇಷನ್ ನ ಉಡುಪಿ ಜಿಲ್ಲಾಧ್ಯಕರು ಹಾಗೂ ಮಾಲಕರು, ಔಟ್ ಫಿಟ್ ಲೇಡೀಸ್ ಟೈಲರ್,ಉಡುಪಿ ಮಾತನಾಡಿದ, ಮಹಿಳೆಯರು ತಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಟೈಲರಿಂಗ್ ಹಾಗೂ ಎಂಬ್ರಾಯ್ಡರಿ ಉದ್ಯಮವು ಅತ್ಯಂತ ಲಾಭದಾಯಕ ಹಾಗೂ ಬಹಳ ಬೇಡಿಕೆಯಿರುವ ಕ್ಷೇತ್ರವಾಗಿದೆ. ಇದರಿಂದ ಮಹಿಳೆಯರಿಗೆ ಸ್ವ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಸಬಲತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಸ್ವಾಭಿಮಾನದಿಂದ ಬದುಕಲು ಪ್ರೇರಣೆ ನೀಡುತ್ತದೆ. ಇನ್ನೊಬ್ಬರ ಮುಂದೆ ನಿಂತು ಕೈ ಚಾಚುವ ಪ್ರಮೇಯ ತಪ್ಪುತ್ತದೆ. ಹಾಗಾಗಿ ಸ್ವ ಉದ್ಯೋಗ ಆರ್ಥಿಕ ಭದ್ರತೆ ಜೊತೆಗೆ ಆತ್ಮವಿಶ್ವಾಸದ ಕೊಂಡಿಯಾಗಲಿದೆ ಎಂದರು. ಸಮಾಜದಲ್ಲಿ ಗೌರವಯುತವಾದ ಸ್ಥಾನ ಮಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಯುವ ಜನತೆಗೆ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಸಂಸ್ಥೆ ನೆರವಾಗ್ತಿದೆ. ಒಂದು ತಿಂಗಳು ತಮ್ಮ ಇತರೆ ಕೆಲಸಗಳನ್ನು ಬದಿಗಿರಿಸಿ, ಸಂಸ್ಥೆಯು ನೀಡುವ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದು ಯಶಸ್ವಿ ಉದ್ಯಮಗಳಾಗಿ ಎಂದು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ, ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯಲ್ಲಿ ಸಿಗುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು, ಇಲ್ಲಿನ ಸವಲತ್ತುಗಳನ್ನು ನಿಮ್ಮ ಪ್ರೀತಿಪಾತ್ರರಲಿ ಹಂಚಿಕೊಂಡು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.
ಬೆಂಗಳೂರು-ಸಮಾಜಸೇವಕ ಕಾರ್ಕಡ ತಾರಾನಾಥ ಹೊಳ್ಳ ಸೇರಿದಂತೆ ಆರು ಜನ ಸಾಧಕರಿಗೆ ನರಸಿಂಹ ಪ್ರಶಸ್ತಿ ಪ್ರದಾನ ಬೆಂಗಳೂರು-ಸಮಾಜಸೇವಕ ಕಾರ್ಕಡ ತಾರಾನಾಥ ಹೊಳ್ಳ ಸೇರಿದಂತೆ ಆರು ಜನ ಸಾಧಕರಿಗೆ ನರಸಿಂಹ ಪ್ರಶಸ್ತಿ ಪ್ರದಾನ ಕೋಟ:ಕೂಟ ಮಹಾಜಗತ್ತು ಸಾಲಿಗ್ರಾಮ (ಬೆಂಗಳೂರು ಅಂಗಸಂಸ್ಥೆ) ವತಿಯಿಂದ ಬಸವನಗುಡಿ ರಸ್ತೆಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ನರಸಿಂಹ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಲ್ ಬಿ. ಚಿನ್ಮಯ್, ಲೆಫ್ಟಿನೆಂಟ್ ಕರ್ನಲ್ ಪುಷ್ಪ ಕಫ್ರಿ, ಉದ್ಯಮಿ ಜಿ.ಪ್ರಕಾಶ್ ಮಯ್ಯ, ಡಾ. ಎ.ಎಸ್.ಕೃಷ್ಣಮೂರ್ತಿ […]
ಫೆಬ್ರವರಿ 14ಕ್ಕೆ ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ; ಪೂರ್ವಭಾವಿ ಸಭೆ ಬಿಳಿ ಬಣ್ಣವನ್ನು ನೋಡಿ ಹೆದರುವ ಪ್ರಾಣಿ. ಹುಲಿ ಕೋಟ: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜಿಸುವ ಅಭಿಮತ ಸಂಭ್ರಮ 2026 ರ ಫೆಬ್ರವರಿ ತಿಂಗಳ ಹದಿನಾಲ್ಕನೇ ತಾರೀಕಿನಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎನ್ನುವುದಾಗಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ವಡ್ಡರ್ಸೆಯಲ್ಲಿ ನಡೆದ ಅಭಿಮತ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು. ಅಭಿಮತ ಸಂಭ್ರಮ ಎನ್ನುವುದು ರಾಜ್ಯದಲ್ಲೇ ಒಂದು ಮಾದರಿ […]
ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್, ಗ್ರಾಮೀಣ ಪ್ರದೇಶಗಳಲ್ಲಿ ದುರ್ಗಮ ರಸ್ತೆಗಳು ಇವುಗಳಿಂದಾಗಿ ಅನೇಕ ಬಾರಿ ತುರ್ತು ವೈದ್ಯಕೀಯ ಸೇವೆ ಸಕಾಲಕ್ಕೆ ಲಭ್ಯವಾಗದೆ ರೋಗಿಗಳು ಪ್ರಾಣ ಕಳೆದುಕೊಳ್ಳುವ ದಾರುಣ ಘಟನೆಗಳು ಸಂಭವಿಸುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಕರ್ನಾಟಕ ಸರ್ಕಾರವು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಬಹಳ ಬೇಗ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ರಾಜ್ಯದಲ್ಲಿ ಶೀಘ್ರದಲ್ಲೇ ‘ಬೈಕ್ ಆ್ಯಂಬುಲೆನ್ಸ್’ ವ್ಯವಸ್ಥೆಯನ್ನು ಜಾರಿಗೊಳಿಸಲು ಆರೋಗ್ಯ ಸಚಿವರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. […]