ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಭಾಗ್ಯರಾಜ್(73) ನಿಧನರಾದರು. ಹಠಾತ್ ಹೃದಯಾಘಾತದಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೆ ನಿಧನರಾದರು. ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು, ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದರು. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿ & ಹಾಸ್ಯಭರಿತ ಕಥೆಗಳ ಮೂಲಕ ಜನಪ್ರಿಯರಾಗಿದ್ದ ಇವರನ್ನು ‘ಚಿತ್ರಕಥೆಯ ರಾಜ’ ಎಂದೂ ಕರೆಯಲಾಗುತ್ತಿತ್ತು. ಇವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
2-3 ವಾರಗಳಲ್ಲಿ ಭೀಕರ ದಾಳಿ ನಡೆಸಲಿದ್ದೇವೆ: ಟ್ರಂಪ್ ಇರಾನ್ನೊಂದಿಗಿನ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ‘ಇನ್ನು 2-3 ವಾರಗಳಲ್ಲಿ ಇರಾನ್ ಮೇಲೆ ಉಗ್ರದಾಳಿ ನಡೆಸಲಿದ್ದೇವೆ. ಈಗಾಗಲೇ ಅವರ ನೌಕಾಪಡೆ, ವಾಯುಪಡೆ ಧ್ವಂಸಗೊಳಿಸಿದ್ದೇವೆ. ಪ್ರಮುಖ ನಾಯಕರನ್ನು ಮಟ್ಟ ಹಾಕಿದ್ದೇವೆ. ಇರಾನ್ ಒಪ್ಪಂದಕ್ಕೆ ಒಪ್ಪದಿದ್ದರೆ, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತೇವೆ. ಹಾರ್ಮುಜ್ನಿಂದ ನಮಗೆ ಇಂಧನದ ಅಗತ್ಯವಿಲ್ಲ. ಇತರ ರಾಷ್ಟ್ರಗಳು ಬಯಸಿದರೆ, ಅದನ್ನು ತಾವೇ ತೆಗೆದುಕೊಂಡು ಹೋಗಲಿ’ ಎಂದಿದ್ದಾರೆ.