webnews kannada

ಚಿಕ್ಕಮಗಳೂರಿನ ವ್ಯಕ್ತಿ ಫೇಸ್​ಬುಕ್ ಜಾಹೀರಾತು ನಂಬಿ 1.28 ಕೋಟಿ ರೂ ಕಳೆದುಕೊಂಡ

ಚಿಕ್ಕಮಗಳೂರಿನ ವ್ಯಕ್ತಿ ಫೇಸ್​ಬುಕ್ ಜಾಹೀರಾತು ನಂಬಿ 1.28 ಕೋಟಿ ರೂ ಕಳೆದುಕೊಂಡ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ಹಣ ವಂಚಿಸಿದ್ದಾರೆ. ‘FYERS’ ಎಂಬ‌ ಟ್ರೇಡಿಂಗ್ ಜಾಹೀರಾತನ್ನು ಫೇಸ್​ಬುಕ್​ನಲ್ಲಿ ನೋಡಿದ ಕಲ್ಲೇಗೌಡರು F8-FYERS ಸೆಕ್ಯೂರಿಟೀಸ್ ವಾಟ್ಸಾಪ್​ ಗ್ರೂಪ್​ ಸೇರಿದ್ದಾರೆ
ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕಲ್ಲೇಗೌಡಗೆ ವಂಚಕರು ಹೆಚ್ಚಿನ‌‌ ಲಾಭ ಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1 ಕೋಟಿ 28 ಲಕ್ಷದ 10 ಸಾವಿರ ರೂ.‌ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಹೀಗಾಗಿ ಕಲ್ಲೇಗೌಡರು ಹಣ ವಿತ್​ಡ್ರಾ ಮಾಡಲು ಹೋದಾಗ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಲ್ಲೇಗೌಡರಿಂದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ

Leave a Reply

Your email address will not be published. Required fields are marked *