ಶ್ರೀ ವಿನಾಯಕ ಯುವಕ‌ ಮಂಡಲದಿಂದ ಅನಾಥಶ್ರಮಕ್ಕೆ ಆಹಾರ ಸಾಮಗ್ರಿ ಹಸ್ತಾಂತರ

ಶ್ರೀ ವಿನಾಯಕ ಯುವಕ‌ ಮಂಡಲದಿಂದ ಅನಾಥಶ್ರಮಕ್ಕೆ ಆಹಾರ ಸಾಮಗ್ರಿ ಹಸ್ತಾಂತರ1 


 ಉತ್ತರ. 1 ನವೆಂಬರ್ 1956. 



 


ಕೋಟ : ಶ್ರೀ ವಿನಾಯಕ ಯುವಕ ಮಂಡಲ ( ರಿ‌) ಸಾೖಬ್ರಕಟ್ಟೆ -ಯಡ್ತಾಡಿ ಇವರ ವತಿಯಿಂದ ಸಾಲಿಗ್ರಾಮದ ಹೊಸಬದುಕು ಅನಾಥಶ್ರಮಕ್ಕೆ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಆಹಾರ ಸಾಮಾಗ್ರಿ ಸ್ವೀಕರಿಸಿ ಮಾತನಾಡಿದ ಆಶ್ರಮದ ಸಂಚಾಲಕ ಶ್ರೀ ಹ.ರಾ ವಿನಯಚಂದ್ರ ಅವರು ಯುವಕ ಮಂಡಲವು ನೊಂದವರ ಅಶಕ್ತರ ನೆರವಿಗಾಗಿ ಕಾರ್ಯಕ್ರಮಗಳ ಮೂಲಕ ಅವರ ಪರ ಧ್ವನಿಯಾಗುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಯುವಕ‌ ಮಂಡಲದ ಅಧ್ಯಕ್ಷ ಶ್ರೀ ಪ್ರಭಾಕರ ಪೂಜಾರಿ, ಕಾರ್ಯದರ್ಶಿ ಶ್ರೀ ಸುಧಾಕರ ನಾಯ್ಕ ಹಾಗೂ ಯುವಕ‌ ಮಂಡಲದ ಸದಸ್ಯರು ಉಪಸ್ಥಿತರಿದ್ದರು.3

Leave a Reply

Your email address will not be published. Required fields are marked *