
ಕೋಟ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯ ಪ್ರಯುಕ್ತ ‘ಶ್ರೀ ನಾರಾಯಣಗುರು ಪರಿವರ್ತನಾ ಜಾಥಾ’ ಕಾರ್ಯಕ್ರಮವನ್ನು ಆಗಸ್ಟ್ 30ರ ಭಾನುವಾರದಂದು ಆಯೋಜಿಸಿದೆ
ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಸಮರ್ಪಣಾ ಕೋಟ ಹಾಗೂ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಇವುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 8:30 ರಿಂದ ಸಾಸ್ತಾನ ಪೇಟೆ ಮಾರ್ಗವಾಗಿ ಪ್ರಾರಂಭಗೊಳ್ಳುವ ಈ ಜಾಥಾ ಕೋಡಿ ,ಪಾರಂಪಳ್ಳಿ ಪಡುಕೆರೆ , ಕೋಟ ,ಸಾಲಿಗ್ರಾಮ ಮಾರ್ಗವಾಗಿ ಸಾಗಿ, ಅಂತಿಮವಾಗಿ ಸಾಸ್ತಾನ ಗೋಳಿಗರಡಿ ದೇವಸ್ಥಾನದ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


