ಕುಂದಾಪುರ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಕೊಲ್ಲೂರು ಸಮೀಪದ ಮೇಗಿನಿ ವ್ಯಾಲಿ ಮೀಸಲು ಅರಣ್ಯದಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿ ಪತ್ತೆಯಾಗಿದೆ.
ಪಶ್ಚಿಮಘಟ್ಟಕ್ಕೆ ಮಾತ್ರ ಸೀಮಿತವಾದ ಸ್ಥಳೀಯವಾಗಿ ಮಾತ್ರ ಕಂಡು ಬರುವ(ಎಂಡಮಿಕ್) ಪ್ರಭೇದವನ್ನು ಸ್ಥಳೀಯ ಗಸ್ತು ಅರಣ್ಯ ಪಾಲಕ ಅಜೀರ್ ಕೆ. ಪತ್ತೆ ಹಚ್ಚಿದ್ದು ಅದಕ್ಕೆ ಘಟಿಯಾನಾ ಕರ್ನಾಟಕ ಎಂಬುದಾಗಿ ವೈಜ್ಞಾನಿಕ ಹೆಸರನ್ನು ಇಡಲಾಗಿದೆ. ಸಾಮಾನ್ಯವಾಗಿ ‘ಕರ್ನಾಟಕ ಘಾಟ್ ಏಡಿ’ ಎಂದು ಇದನ್ನು ಕರೆಯಲಾಗುತ್ತದೆ.
ಈ ಏಡಿಯ ಪ್ರಭೇದವು ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ, ಮಾದಿಬರೆ, ಮುರ್ಕೊಡಿ ಹೊಲ, ಗುಂಡಲಬೇರು, ಕೊರತಿಕಲ್ ಬರೆ, ಕೊರಕೊಪ್ಪದ ಹೊಲ, ಜನ್ನಲಾಣೆ, ಅಬ್ಬಿಗುಡ್ಡೆ ಹಾಗೂ ಚಿತ್ತೂರು ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲಿನ 35 ಕಿ.ಮೀ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 60ರಿಂದ 250 ಮೀ. ಎತ್ತರದಲ್ಲಿ ಕಾಣ ಸಿಗುತ್ತದೆ. ರಾಜ್ಯಕ್ಕೆ ಗೌರವ ಸಮರ್ಪಿಸುವ ಉದ್ದೇಶ ದಿಂದಾಗಿ ಈ ಹೊಸ ಏಡಿ ಪ್ರಭೇದಕ್ಕೆ ‘ಘಾಟಿಯಾನ ಕರ್ನಾಟಕ’ ಎಂಬ ಹೆಸರು ನೀಡಲಾಗಿದೆ. ಈ ಪಡಿಯನ್ನು
ಸ್ಥಳೀಯವಾಗಿ ‘ಮಳೆ ಏಡಿ’ ಕರೆಯಲಾಗುತ್ತದೆ. ಬೇಸಿಗೆಯಲ್ಲೂ ಪತ್ತೆ: ಹೊಸ ಪ್ರಭೇದದ ಗಂಡು ಏಡಿ
ಗಾಢ ನೇರಳೆ ಬಣ್ಣ ಮತ್ತು ಮುಂಭಾಗ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಏಡಿ ಬೂದು, ನೇರಳೆ ಹಾಗೂ ಗಾಢ ಬೂದು, ಕಂದು ಬಣ್ಣಗಳ ಮಿಶ್ರಣದಿಂದ
ಕೂಡಿರುತ್ತದೆ. ಇವು ಮಳೆಗಾಲದಲ್ಲಿ ಸಂತಾ ನೋತ್ಪತ್ತಿ ನಡೆಸುತ್ತವೆ. ಇವು ಮರದ ಪೊಟರೆ ಮತ್ತು ಜಂಬಿಟ್ಟಿಗೆ (ಲ್ಯಾಟರೈಟ್) ಬಂಡೆಗಳ ನೀರು ತುಂಬಿದ ರಂಧ್ರಗಳಲ್ಲಿ ವಾಸಿಸುತ್ತವೆ. ಈ ಏಡಿಗಳು ಬೇಸಿಗೆಯಲ್ಲಿ ಯೂ ಕಂಡು ಬರುತ್ತದೆ. ಯಾಕೆಂದರೆ ಇವುಗಳ ಆವಾಸ ಸ್ಥಾನ ನಿತ್ಯ ಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರು ವುದರಿಂದ, ಬೇಸಿಗೆಯಲ್ಲಿಯೂ ತೇವಾಂಶದ ಪ್ರಮಾಣವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ.
ಅಲ್ಲದೆ ಮಾವಿನಕಾರು, ಜಡ್ಡಲ್ ಮತ್ತು ಸೌಪರ್ಣಿಕಾ ನದಿಗಳು ವರ್ಷದ ಹಲವು ತಿಂಗಳು ಹರಿಯುವುದರಿಂದ ಮರಗಳ ರಂಧ್ರಗಳು ಹಾಗೂ ಇತರ ನೈಸರ್ಗಿಕ ಕುಳಿಗಳಲ್ಲಿ ಬೇಸಿಗೆಯ ಅವಧಿಯಲ್ಲಿಯೂ ನೀರು ಸಂಗ್ರಹವಾಗಿರು ತ್ತದೆ. ಈ ನೀರಿನಿಂದ ಕೂಡಿದ ರಂಧ್ರಗಳು ಮತ್ತು ಕುಳಿಗಳು
ಏಡಿಗಳಿಗೆ ಅನುಕೂಲಕರವಾದ ಅವಾಸಸ್ಥಾನವಾಗಿದೆ.
ಎಂಟನೇ ಪ್ರಭೇದ: ಭಾರತದ ಪಶ್ಚಿಮಘಟ್ಟಗಳಲ್ಲಿ ಈವರೆಗೆ ಒಟ್ಟು 14 ಬಗೆಯ ಘಟಿಯಾನ ಏಡಿ ಪ್ರಭೇದಗಳನ್ನು ಪತ್ತೆ ಮಾಡಲಾಗಿದೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಈವರೆಗೆ ಏಳು ಘಟಿಯಾನ ಪ್ರಭೇದದ ಏಡಿಗಳು ಪತ್ತೆಯಾಗಿವೆ. ಇದೀಗ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಘಟಿಯಾನಾ ಕರ್ನಾಟಕ ಎಂಟನೇ ಪ್ರಭೇದ ಇದಾಗಿದೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಸಂಸ್ಥೆಯು – ದೃಢಪಡಿಸಿದೆ.
ಯುವಜನರು ಆರ್ಥಿಕ ಸ್ವಾತಂತ್ರ್ಯ ಸಾಧಿಸಿ ಮುನ್ನಡೆಯಬೇಕು : ಬಿ.ಪಿ. ವಿಜಯ ಕುಮಾರ್ ಉಜಿರೆ : ದೇಶದ ಸ್ವಾತಂತ್ರ್ಯದ ಜೊತೆಗೆ ಯುವಜನರು ಆರ್ಥಿಕ ಸ್ವಾತಂತ್ರ್ಯವನ್ನೂ ಸಾಧಿಸಿ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದು ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯ ಕುಮಾರ್* ಅವರು ಹೇಳಿದರು. ಅವರು ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಣ, ಕೌಶಲ್ಯ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ […]
ಕೋಟ: ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿವರ್ಷ ಕೊಡಮಾಡುವ ಅತ್ಯತ್ತಮ ಹಾಲು ಉತ್ಪಾದಕರ ಸಂಘ ಪ್ರಶಸ್ತಿಗೆ ಇಲ್ಲಿನ ಸಾಸ್ತಾನದ ಪಾಂಡೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆಯ್ಕೆಗೊಳಿಸಿ ಶನಿವಾರ ಪ್ರಶಸ್ತಿಯನ್ನು ಪ್ರದಾನಿಸಿತು.ಆ.22ರಂದು ಮಂಗಳೂರಿನ ದಕ್ಷಿಣಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ವೆಲೇರಿಯನ್ ಡಿಸೋಜ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ಇವರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಐಕಳದ ಬಾವ ಡಾ.ದೇವಿಪ್ರಸಾದ್ ಶೆಟ್ಟಿ ಪ್ರಶಸ್ತಿ […]
ಕ್ರಾಂತಿಕಾರಿ,ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯ- ಸಂಸದ ಕೋಟ: ಕ್ರಾಂತಿಕಾರಿಗಳ ಹಾಗೂ ಅಹಿಂಸಾ ತತ್ವದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ ಇದಕ್ಕೆ ಕಾರ್ನಾಡ ಸದಾಶಿವ ರಾವ್ ಅವರ ಆ ಕಾಲಘಟ್ಟದ ಹೋರಾಟ ದಿನಗಳನ್ನು ನೆನೆಪಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರಸ್ತುತ ದೇಶ ಕಾಯುವ ಯೋಧರ ತ್ಯಾಗ ಬಲಿದಾನ ದೇಶವನ್ನು ಸುಭದ್ರತೆಗೊಳಿಸಿದೆ. ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ 80 ನೇ ಹಸಿರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು […]