
ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರಿನ ವಾಣಿಜ್ಯ ವಿಭಾಗದ ವತಿಯಿಂದ ಆಗಸ್ಟ್ 5, 2026ರಂದು ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಯಿತು.

ಸುಜ್ಞಾನ ನ್ಯಾಷನಲ್ ಪಿ ಯು ಕಾಲೇಜಿನ 100 ವಿದ್ಯಾರ್ಥಿಗಳ ತಂಡವು ಗೋಡಂಬಿ ಸಂಸ್ಕರಣಾ ಘಟಕದ ನೈಜ ಕಾರ್ಯವಿಧಾನವನ್ನು ನೇರವಾಗಿ ವೀಕ್ಷಿಸಿ, ಉತ್ಪಾದನಾ ಪ್ರಕ್ರಿಯೆ, ಗುಣಮಟ್ಟ ನಿಯಂತ್ರಣ, ಪ್ಯಾಕೇಜಿಂಗ್ ತಂತ್ರಗಳು ಹಾಗೂ ವ್ಯವಹಾರ ನಿರ್ವಹಣೆ ಮತ್ತು ಆಡಳಿತದ ಕುರಿತು ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು. .

ಈ ಪ್ರಾಯೋಗಿಕ ಅನುಭವವು ತರಗತಿಯ ಕಲಿಕೆ ಮತ್ತು ನೈಜ ಕೈಗಾರಿಕಾ ಚಟುವಟಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಯಿತು. ಇದರಿಂದ ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಅರ್ಥಪೂರ್ಣ ಹಾಗೂ ಪ್ರಾಯೋಗಿಕವಾಯಿತು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಂಪತ್ ಕುಮಾರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆತ್ಮವಿಶ್ವಾಸ, ಕಠಿಣ ಪರಿಶ್ರಮ ಹಾಗೂ ಸ್ಪಷ್ಟ ಗುರಿಯನ್ನು ಹೊಂದಿದ್ದರೆ ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ.ತಮ್ಮ ಕನಸುಗಳನ್ನು ನನಸಾಗಿಸುವ ಛಲದಿಂದ ಮುನ್ನಡೆಯುವಂತೆ ಪ್ರೇರಣಾದಾಯಕ ಮಾತುಗಳನ್ನು ಆಡಿದರು.

ಕೈಗಾರಿಕಾ ಭೇಟಿಗೆ ಅವಕಾಶವನ್ನು ಕಲ್ಪಿಸಿಕೊಟ್ಟ ಆಡಳಿತ ನಿರ್ದೇಶಕರಾಗಿರುವ ಶ್ರೀ ಸಂಪತ್ ಕುಮಾರ್ ಶೆಟ್ಟಿಯವರಿಗೂ ಹಾಗೂ ಭೇಟಿಯುದ್ದಕ್ಕೂ ಮಾರ್ಗದರ್ಶನ ಮತ್ತು ಮಾಹಿತಿಯನ್ನು ನೀಡಿದ ಸಿಬ್ಬಂಧಿ ವರ್ಗದವರಿಗೂ ಕಾಲೇಜಿನ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು .

