🚨 ಕರಾವಳಿ ಲೈವ್: ಇಂದಿನ ಪ್ರಮುಖ ಸುದ್ದಿಗಳಿಗಾಗಿ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ! ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯಲ್ಲಿ ‘ಆಟಿ ಅಮಾವಾಸ್ಯೆ‘ಗೆ ಅತ್ಯಂತ ವಿಶೇಷ ಸ್ಥಾನವಿದೆ. ಈ ಬಾರಿ ಆಗಸ್ಟ್ 12ರ ಬುಧವಾರದಂದು ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನ ವಿವಿಧ ಭಾಗಗಳಲ್ಲಿ ಈ ದಿನಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಸಂಪ್ರದಾಯಗಳು ಸಂಭ್ರಮದಿಂದ ನೆರವೇರಿಸಲಾಗುತ್ತದೆ. ಆಷಾಢ ಮಾಸದ ಅಮಾವಾಸ್ಯೆಗೆ ವಿಶೇಷ ಮಹತ್ವ: ಆಷಾಢ ಮಾಸದ ಅಮಾವಾಸ್ಯೆಯನ್ನೇ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ […]
Month: August 2026
ನಾಳೆ ಭೀಮನ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಈ ದಿನ ವ್ರತ, ಪೂಜೆ ಮಾಡಬಹುದೇ?
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಮಹತ್ವ ಹೊಂದಿರುವ ಭೀಮನ ಅಮಾವಾಸ್ಯೆ ನಾಳೆ (ಆಗಸ್ಟ್ 12) ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಕಾಶದಲ್ಲಿ ಸೂರ್ಯಗ್ರಹಣವೂ ಸಂಭವಿಸಲಿದೆ ಎಂಬ ಕಾರಣಕ್ಕೆ ಈ ಬಾರಿಯ ಭೀಮನ ಅಮಾವಾಸ್ಯೆ ವಿಶೇಷ ಗಮನ ಸೆಳೆಯುತ್ತಿದೆ. ಅಮಾವಾಸ್ಯೆ ಮತ್ತು ಗ್ರಹಣದ ಈ ಸಂಯೋಗವನ್ನು ಧಾರ್ಮಿಕ ಹಾಗೂ ಖಗೋಳಶಾಸ್ತ್ರೀಯ ದೃಷ್ಟಿಯಿಂದ ಕುತೂಹಲಕಾರಿ ವಿದ್ಯಮಾನವೆಂದು ಪರಿಗಣಿಸಲಾಗುತ್ತಿದೆ. ಆದ್ದರಿಂದ ಸಾಕಷ್ಟು ಮಹಿಳೆಯರಿಗೆ ಈ ದಿನ ವ್ರತ ಹಾಗೂ ಪೂಜೆ ಮಾಡಬಹುದೇ? ಎಂಬ ಗೊಂದಲವಿದೆ. ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ. ಆಷಾಢ ಮಾಸದ ಅಮಾವಾಸ್ಯೆಯನ್ನು ಕರ್ನಾಟಕ ಸೇರಿದಂತೆ […]
ಉಡುಪಿ ಜಿಲ್ಲಾಧಿಕಾರಿಯವರಿಂದ ರುಡ್ಸೆಟ್ ಸಂಸ್ಥೆ ಬ್ರಹ್ಮಾವರದಲ್ಲಿ ಅಗರಬತ್ತಿ ತಯಾರಿಕೆ ತರಬೇತಿ ವೀಕ್ಷಣೆ
ಬ್ರಹ್ಮಾವರ, ಆಗಸ್ಟ್ 08: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ನಡೆಯುತ್ತಿರುವ ಅಗರಬತ್ತಿ ತಯಾರಿಕೆ ತರಬೇತಿಯನ್ನು ಮಾನ್ಯ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ. ಕೆ. ಅವರು ವೀಕ್ಷಿಸಿ, ತರಬೇತಿಯ ಪ್ರಗತಿಯ ಕುರಿತು ಪರಿಶೀಲಿಸಿದರು.ಜಿಲ್ಲಾಧಿಕಾರಿಯವರ ಆಶಯದಂತೆ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುಬಳಕೆ ಮಾಡಿಕೊಂಡು ಸುಗಂಧಭರಿತ ಅಗರಬತ್ತಿಯನ್ನು ತಯಾರಿಸಿ, ಸೂಕ್ತ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಸ್ವ ಉದ್ಯೋಗದ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಈ 12 […]
ಕ್ರೀಡೆಯಲ್ಲಿ ಭಾಗವಹಿಸಿದವರೇ ಸಾಧನೆಯ ಶಿಖರಕ್ಕೇರುತ್ತಾರೆ”: ಕ್ರೀಡಾಪಟುಗಳೊಂದಿಗೆ ಪಿಎಂ ಮೋದಿ ಸಂವಾದ
ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ (CWG 2026) ಭಾರತದ ಕೀರ್ತಿ ಪತಾಕೆ ಹಾರಿಸಿ ಮರಳಿದ ಕ್ರೀಡಾಪಟುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್ 9, 2026) ದೆಹಲಿಯ ತಮ್ಮ ಅಧಿಕೃತ ನಿವಾಸವಾದ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬರಮಾಡಿಕೊಂಡು ಆತ್ಮೀಯವಾಗಿ ಗೌರವಿಸಿದರು. ಕ್ರೀಡಾಕೂಟದಲ್ಲಿ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ಜಯಿಸಿ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ತಂಡದ […]
World Loin Day 2026: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು
ಕಾಡಿನ ರಾಜ ಸಿಂಹ (lion) ತನ್ನ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿ. ಅದೇ ರೀತಿ ಈ ಸಿಂಹಗಳ ಸಂತತಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಈ ಸಿಂಹಗಳು ಕ್ರಮೇಣ ವಿನಾಶದಂಚಿಗೆ ತಲುಪುತ್ತಿವೆ. ಆಧುನೀಕರಣ, ಅರಣ್ಯನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದ ಇಂದು ಕಾಡಿನ ರಾಜನ ಸಂತತಿ ಕ್ಷೀಣಿಸುತ್ತಿದೆ. ಈ ಗಂಭೀರತೆಯನ್ನು ಪರಿಗಣಿಸಿ, ಸಿಂಹಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿವರ್ಷ […]
ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ
ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು (Bengaluru-Mumbai Vande Bharat Sleeper) ಸಂಚಾರಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದೆ. ನೈಋತ್ಯ ರೈಲ್ವೆ (SWR) ಎರಡು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ನಿಯೋಜನೆ ಮಾಡಿದೆ. ಶೀಘ್ರದಲ್ಲೇ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ನಡೆಸಿ, ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ .ಬೆಂಗಳೂರಿನಲ್ಲೇ ಬಿಇಎಂಎಲ್ (BEML) ತಯಾರಿಸಿದ ಈ ಎರಡು ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ನಿರ್ಮಿಸಲಾಗಿದೆ. ವಿವಿಧ ಹಂತದ […]
ರಾಜ್ಯಮಟ್ಟದ ಈಜುಕೂಟ: ಉಜಿರೆಯ ಕಿರಿಯ ಈಜುಪಟು ಬೆನಕಗೆ ಕಂಚಿನ ಪದಕ
ಹಾಸನದ ‘ಎಸ್‌ಕೆ ಸ್ವಿಮ್ಮಿಂಗ್ ಸೆಂಟರ್’ (ಮಿಲೇನಿಯಮ್ ವರ್ಲ್ಡ್ ಸ್ಕೂಲ್)ನಲ್ಲಿ ನಡೆದ ರಾಜ್ಯಮಟ್ಟದ ‘ನಾನ್-ಮೆಡಲಿಸ್ಟ್’ ಈಜು ಸ್ಪರ್ಧೆಯಲ್ಲಿ ಉಜಿರೆಯ ಕಿರಿಯ ಈಜುಪಟು ಬೆನಕ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಂಚಿನ ಪದಕಕ್ಕೆ (Bronze Medal) ಕೊರಳೊಡ್ಡಿದ್ದಾರೆ. 6.7 ವರ್ಷ ಪ್ರಾಯದ ಬಾಲಕ ಬೆನಕ, ‘ಬ್ರೆಸ್ಟ್ ಸ್ಟ್ರೋಕ್’ (Breast Stroke) ಈಜು ಸ್ಪರ್ಧೆಯನ್ನು ಕೇವಲ 25.50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮೂರನೇ ಸ್ಥಾನದೊಂದಿಗೆ ಸಾಧನೆ ಮೆರೆದಿದ್ದಾರೆ. ಬೆನಕ ಅವರು ಅಶ್ವಿನಿ ಮತ್ತು ಪದ್ಮನಾಭ ದಂಪತಿಯ ಪುತ್ರ. ಪ್ರಸ್ತುತ ಉಜಿರೆಯ ಎಸ್‌ಡಿಎಂ ಎಜುಕೇಶನಲ್ […]
ರಾಜ್ಯದ 22 ಜಿಲ್ಲೆಗಳಲ್ಲಿ ಆಗಸ್ಟ್ 13ರವರೆಗೆ ಮಳೆ ಅಬ್ಬರ: ಹವಾಮಾನ ಇಲಾಖೆ
ದಕ್ಷಿಣ ಭಾರತದಲ್ಲಿ ನೈರುತ್ಯ ಮುಂಗಾರು ಮಾರುತಗಳು ತೀವ್ರಗೊಂಡಿವೆ. ಪರಿಣಾಮ, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 13ರವರೆಗೆ ಮಳೆ ಅಬ್ಬರ ಮುಂದುವರೆಯಲಿದೆ ಎಂದು ತಿಳಿಸಿದೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ರಾಮನಗರ, ವಿಜಯನಗರ, ಬೆಳಗಾವಿ, ಧಾರವಾಡ, ಗದಗ, […]
ಜ್ಯೋತಿ ಸಾಲಿಗ್ರಾಮ ಇವರಿಗೆ ಪಂಚವರ್ಣದ ಆಸಾಡಿ ಒಡ್ರ್ ಪುರಸ್ಕಾರ ಪ್ರದಾನನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಿ- ಮನು ಹಂದಾಡಿ
ಕೋಟ: ಪ್ರತಿಯೊಬ್ಬರೂ ತಮ್ಮ ನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿ ಮಾಡಿಕೊಂಡಾಗ ಮನಸ್ಸಿನ ಮಾತುಗಳಿಗೆ ನ್ಯಾಯಯುತ ಮೌಲ್ಯಗಳು ದೊರೆಯುತ್ತವೆ. ಅದೇ ರೀತಿ ಕುಂದಾಪ್ರ ಕನ್ನಡ ಭಾಷೆ ಗ್ರಾಮೀಣ ಭಾಗದ ಒಂದು ಸುಂದರ ಭಾಷೆಯಾಗಿ ಜಗತ್ತಿನಾದ್ಯಂತ ಮಿಂಚುತ್ತಿದೆ. ಕುಂದಾಪ್ರ ಕನ್ನಡ ಅದೊಂದು ವಿಶಿಷ್ಟ ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆ ಎಂದು ಕುಂದಗನ್ನಡದ ರಾಯಬಾರಿ ಮನು ಹಂದಾಡಿ ಹೇಳಿದರು.ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಭಾನುವಾರ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಕಾರದೊಂದಿಗೆ […]
Travelling: ಪ್ರಯಾಣ ಮಾಡುವಾಗ ಸಿಕ್ಕಾಪಟ್ಟೆ ನಿದ್ರೆ ಬರಲು ಕಾರಣವೇನು ಗೊತ್ತೇ?
ಮಧ್ಯಾಹ್ನ ಊಟ ಮಾಡಿದ ನಂತರ ಕಣ್ಣು ತೂಕಡಿಸುವಂತೆ, ಬಸ್ಸು, ಕಾರ್, ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುವಾಗ (traveling) ಹೆಚ್ಚಿನವರಿಗೆ ನಿದ್ರೆ ಬಂದಂತಾಗುತ್ತದೆ. ಕೆಲವರಂತೂ ವಾಹನ ಹೊರಟ 10-15 ನಿಮಿಷದೊಳಗೆ ನಿದ್ರೆಗೆ ಜಾರಿ ಬಿಡುತ್ತಾರೆ. ನಿಮಗೂ ಕೂಡ ಇದೇ ರೀತಿ ಪ್ರಯಾಣಿಸುವಾಗ ನಿದ್ರೆ ಬರುತ್ತಾ? ಇದಕ್ಕೆ ಮುಖ್ಯ ಕಾರಣ ವಾಹನದ ಸೌಮ್ಯ ಕಂಪನ, ಎಂಜಿನ್‌ನ ನಿರಂತರ ಶಬ್ದ, ಆರಾಮದಾಯಕ ಆಸನ ಮತ್ತು ಮೆದುಳಿನ ಮೇಲೆ ಒತ್ತಡ ಬೀರದಿರುವುದು. ಈ ಎಲ್ಲಾ ಅಂಶಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ, ಇದರಿಂದಾಗಿ ಹೆಚ್ಚಿನವರು […]


