ಪಂಚವರ್ಣದ ರೈತರೆಡೆಗೆ ನಮ್ಮನಡಿಗೆ ೫೨ನೇ ಸರಣಿ ಕಾರ್ಯಕ್ರಮಕೃಷಿ ಕಾಯಕದಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ- ಮಣೂರು ಭಾಸ್ಕರ ಶೆಟ್ಟಿ


ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಗೆಳೆಯರ ಬಳಗ ಕಾರ್ಕಡ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ ೫೨ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ದಾರೋಜ್ಜಿಮನೆ ಆನಂದ ಕಾಂಚನ್ ಇವರಿಗೆ ಕೃಷಿ ಪುರಸ್ಕಾರ ನೀಡಿ ಗೌರವಿಸಲಾಯಿತು. ತೆಕ್ಕಟ್ಟೆ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಕೋಟತಟ್ಟು ಪಡುಕರೆಯ ಪ್ರಗತಿಪರ ಕೃಷಿಕ ದಿವಾಕರ್ ಐತಾಳ್, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ,ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಇದ್ದರು.

ಕೋಟ.ಫೆ.೨೩ ರೈತರೆಡೆಗೆ ನಮ್ಮ ನಡಿಗೆ

Leave a Reply

Your email address will not be published. Required fields are marked *