ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath)’ಕಾರಿನತ್ತ ನುಗ್ಗಿದ ಬಿಡಾಡಿ ಹಸು!
ಹುಲಿ
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಭದ್ರತೆ ಭೀತಿ ಎದುರಿಸಿದ್ದಾರೆ. ಕಾರಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಬಿಡಾಡಿ ಹಸುವೊಂದು ದಾರಿ ತಪ್ಪಿ ಅವರಿಗೆ ಭದ್ರತಾ ಭೀತಿಯನ್ನುಂಟು ಮಾಡಿದೆ.
ಶುಕ್ರವಾರ ಸಂಜೆ ಆದಿತ್ಯನಾಥ್ ಅವರು ಗೋರಖ್ ನಾಥ್ ಮೇಲ್ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಇದರ ವಿಡಿಯೋ ಭಾನುವಾರ ವೈರಲ್ ಆದ ಬಳಿಕ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಮುನ್ಸಿಪಲ್ ಕಾರ್ಪೊರೇಷನ್ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.
ಸಂಸದ ರವಿ ಕಿಶನ್ ಮೊದಲು ಕಾರಿನಿಂದ ಇಳಿಯುವುದು ವಿಡಿಯೋದಲ್ಲಿ ಕಂಡುಬಂದಿದೆ. ತದನಂತರ ಹಸುವೊಂದು ಯೋಗಿ ಆದಿತ್ಯನಾಥ್ ಅವರ ಕಾರಿನ ಹತ್ತಿರ ಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿ ಹಸುವನ್ನು ಅಲ್ಲಿಂದ ಓಡಿಸಿ, ಯಾವುದೇ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ