ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಂದ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಆಮಂತ್ರಣ ಬಿಡುಗಡೆ
ಹುಲಿ

ಕೋಟ, ಡಿ.25: ಇಂದು ಸಮಾಜದ ಮೂರು ಅಂಗಗಳು ಜನರಲ್ಲಿ ನಂಬಿಕೆ ಕಳೆದುಕೊಂಡಿದೆ.
ಹೀಗಾಗಿ ಸಮಾಜವನ್ನು ತಿದ್ದುವ ಹಾಗೂ ಪರಿವರ್ತನೆ ಮಾಡುವಲ್ಲಿ ಪತ್ರಿಕಾ ರಂಗದ ಬಗ್ಗೆ
ಹೆಚ್ಚು ನಂಬಿಕೆ ಇದೆ. ಮಾಧ್ಯಮಗಳು ಈ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರ‍್ಯ ಮಾಡಬೇಕು
ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿತಿಳಿಸಿದರು.
ಅವರು ಬ್ರಹ್ಮಾವರ ಪತ್ರಕರ್ತರ ಸಂಘ ಆಶ್ರಯದಲ್ಲಿ ಜ.4ರಂದು ನಡೆಯಲಿರುವ ವಡ್ಡರ್ಸೆ
ರಘುರಾಮ ಶೆಟ್ಟಿಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ
ಪತ್ರಿಕೆಯನ್ನು ಡಿ.25ರಂದು ಬ್ರಹ್ಮಾವರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ವಡ್ಡರ್ಸೆ ರಘುರಾಮ ಶೆಟ್ಟಿಯವರು ಪತ್ರಿಕಾರಂಗದಲ್ಲಿ ತನ್ನದೇ ಆದ ಮೌಲ್ಯವನ್ನು
ಉಳಿಸಿಕೊಂಡವರು ಹಾಗೂ ಜೀವನದ ಕೊನೆತನಕ ಆ ಮೌಲ್ಯಗಳಿಗಾಗಿ ಹೋರಾಡಿದವರು. ಪತ್ರಕರ್ತರು
ಎಷ್ಟೇ ಕಷ್ಟವಾದರು ತಮ್ಮ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಹಾಗೂ
ವಡ್ಡರ್ಸೆಯವರನ್ನು ನೆನಪಿನಲ್ಲಿಡುವ ಸಲುವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ
ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ
ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಪದಾಧಿಕಾರಿಗಳಾ ಚಂದ್ರಶೇಖರ್
ಬೀಜಾಡಿ, ಮೋಹನ್ ಉಡುಪ, ಪ್ರವೀಣ್ ಮುದ್ದೂರು, ನಾಗರಾಜ್ ಅಲ್ತಾರು, ಗಣೇಶ್
ಸಾಹೇಬ್ರಕಟ್ಟೆಮೊದಲಾದವರಿದ್ದರು.